ಕಾಸರಗೋಡು: ಜಿಲ್ಲಾ ಪಂಚಾಯಿತಿ ನೇತೃತ್ವದ ಜೀವವೈವಿಧ್ಯ ನಿರ್ವಹಣಾ ಸಮಿತಿಗಳಿಗೆ ಜನವರಿ 28 ರಂದು ಕಾಸರಗೋಡು ಸಿಟಿ ಟವರ್ ಹಾಲ್ ನಲ್ಲಿ ಒಂದು ದಿನದ ಕಾರ್ಯಾಗಾರ ನಡೆಯಲಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಕಾರ್ಯಾಗಾರ ಉದ್ಘಾಟನೆ ನೆರವೇರಿಸುವರು. ಕೇರಳ ರಾಜ್ಯ ಜೀವವೈವಿಧ್ಯ ಸಮಿತಿ ಸದಸ್ಯ ಕೆ.ವಿ.ಗೋವಿಂದನ್ ಅವರು ಜೀವವೈವಿಧ್ಯ ಮಂಡಳಿ ಸಂರಕ್ಷಣಾ ನಿರ್ವಹಣೆ ಮತ್ತು ಬಿ.ಎಂ.ಸಿ ಚಟುವಟಿಕೆಗಳ ಕುರಿತು ತರಗತಿ ನಡೆಸುವರು. ಕಾಸರಗೋಡು ಡಿವೈಎಸ್ಪಿ ಡಾ.ವಿ.ಬಾಲಕೃಷ್ಣನ್ ಜೀವವೈವಿಧ್ಯ ಸಂರಕ್ಷಣಾ ಕಾನೂನುಗಳು ಮತ್ತು ನಾಡಿನ ಬಗ್ಗೆ ಅರಿತುಕೊಲ್ಳುವಲ್ಲಿ ಬಿಎಂಸಿಯ ಪಾತ್ರ ಕುರಿತು ಮಾತನಾಡಲಿದ್ದಾರೆ.
ಇಂದು ಜೀವವೈವಿಧ್ಯ ನಿರ್ವಹಣಾ ಸಮಿತಿಗಳಿಗೆ ಕಾರ್ಯಾಗಾರ
0
ಜನವರಿ 27, 2023

