HEALTH TIPS

ಬಿಜೆಪಿ ಕುಂಬಳೆ ಮಂಡಲ ಪಾದಯಾತ್ರೆಗೆ ಚಾಲನೆ


              ಪೆರ್ಲ: ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳು ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು  ಬುಡಮೇಲು ಮಾಡುವ ಷಡ್ಯಂತ್ರದ ವಿರುದ್ಧ ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ ಮುನ್ನಡೆಸುವ ಪಾದಯಾತ್ರೆಗೆ ಗುರುವಾರ ಬಿಜೆಪಿ ಕೇರಳ ರಾಜ್ಯ ಕಾರ್ಯದರ್ಶಿ ರಂಜಿತ್ ಕುಮಾರ್ ಅವರು ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ, ಪಾದಯಾತ್ರೆಯ ನಾಯಕ ಸುನಿಲ್ ಅನಂತಪುರ ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿ ಉದ್ಘಾಟಿಸಿದರು.
     ಪೆರ್ಲದಲ್ಲಿ ಉದ್ಘಾಟನೆಗೊಂಡ ಕಾರ್ಯಕ್ರಮ ಶುಕ್ರವಾರ ಸೀತಂಗೋಳಿಯಿಂದ ಪುನರಾರಂಭಗೊಂಡು ಕುಂಬಳೆಯಲ್ಲಿ ಮುಕ್ತಾಯಗೊಂಡಿತು. ಇಂದು(ಶನಿವಾರ) ಹೇರೂರಿನಿಂದ ಪ್ರಾರಂಭವಾಗಿ ಉಪ್ಪಳಪೇಟೆಯಲ್ಲಿ ಕಾರ್ಯಕ್ರಮದ ಸಮಾರೊಪ ನಡೆಯಲಿರುವುದು.
        ಬಿಜೆಪಿ ಕುಂಬಳೆ ಮಂಡಲ ಉಪಾಧ್ಯಕ್ಷ ಹಾಗೂ  ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ನಾರಾಯಣ ನಾಯ್ಕ ಅಡ್ಕಸ್ಥಳ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಬಿ.ಜೆ.ಪಿ ಉತ್ತರ ವಲಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಶೆಟ್ಟಿ, ರಾಜ್ಯ ಸಮಿತಿ ಸದಸ್ಯ ಕೋಳಾರ್ ಸತೀಶ್ಚಂದ್ರ  ಭಂಡಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ರೂಪಾವಣಿ ಆರ್ ಭಟ್, ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಅಮೆಕ್ಕಳ, ಯುವ ಮೋರ್ಚಾ ರಾಜ್ಯ ಸೆಲ್ ಸಂಯೋಜಕ ಅಂಜು ಜೋಸ್ಟಿ ಮತ್ತು ಜಿಲ್ಲಾ-ಮಂಡಲ ಪಂಚಾಯತಿ ಸಮಿತಿಗಳ ನೇತಾರರು ಕಾರ್ಯಕರ್ತರು ಭಾಗವಹಿಸಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries