ಕಾಸರಗೋಡು: ಕುಟುಂಬಶ್ರೀಯ ರಜತಮಹೋತ್ಸವ ವರ್ಷಾಚರಣೆ ಅಂಗವಾಗಿ ಜ. 26ರಂದು ಜಿಲ್ಲಾದ್ಯಂತ ಕುಟುಂಬಶ್ರೀ ನೆರೆಕರೆಕೂಟ ಸಂಗಮ'ಹೆಜ್ಜೆ-2023'ಕಾರ್ಯಕ್ರಮ ಆಯೋಜಿಸಲಾಗಿದೆ. ಕುಟುಂಬಶ್ರೀ ರಜತಮಹೋತ್ಸವ ವರ್ಷಾಚರಣೆ ಅಂಗವಾಗಿ ಕುಟುಂಬಶ್ರೀ ದಿನಾಚರಣೆಯ ಮೇ 17ರ ವರೆಗೆ ವಿಶಿಷ್ಟ ಕಾರ್ಯಕ್ರಮ ಆಯಾ ಕೇಂದ್ರಗಳಲ್ಲಿ ನಡೆಯಲಿರುವುದಾಗಿ ಕುಟುಂಬಶ್ರೀ ಅಸಿಸ್ಟೆಂಟ್ ಕೋರ್ಡಿನೇಟರ್ ಪ್ರಕಾಶನ್ ಪಾಲಾಯಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಜತಮಹೋತ್ಸವ ಅಂಗವಾಗಿ ಕುಟುಂಬಶ್ರೀ ನೆರೆಕರೆಕೂಟ ವತಿಯಿಂದ ಕುಟುಂಬಶ್ರೀ ಯುಟ್ಯೂಬ್ ಚ್ಯಾನಲ್ ವೀಕ್ಷಣೆ, ಕುಟುಂಬಶ್ರೀ ನೆರೆಕರೆ ಕೂಟ ಗಾಯನ, ವಿವಿಧ ಕಲಾ, ಸಾಹಿತ್ಯಿಕ, ಸಾಂಸ್ಕøತಿಕ ಕಾರ್ಯಕ್ರಮ, ಆರೋಗ್ಯ ಮಾಹಿತಿ, ಶುಚಿತ್ವ, ಮಾಲಿನ್ಯ ಸಂಸ್ಕರಣೆ ಮುಂತಾದ ವಿಷಯಗಳ ಬಗ್ಗೆ ಚರ್ಚೆಗಳೂ ನಡೆಯುವುದು. 26ರಂದು ಬೆಳಗ್ಗೆ 8ಕ್ಕೆ ಧ್ವಜಾರೋಹಣ, ನೆರೆಕರೆ ಕೂಟ ಗಾಯನ, ಕುಟುಂಬಶ್ರೀ ಸಂಗಮದ ಹಿನ್ನೆಲೆಯಲ್ಲಿ ವಿಶೇಷ ಕರ್ಯಕ್ರಮ, ರಜತಮಹೋತ್ಸವದ ನಿರಂತರ ಕಾರ್ಯಕ್ರಮಗಳ ಬಗ್ಗೆ ವಿಶ್ಲೇಷಣೆ ನಡೆಯುವುದು. ಜಿಲ್ಲೆಯ 38ಗ್ರಾಪಂ ಹಾಗೂ ಮೂರು ನಗರಸಭಾ ವ್ಯಾಪ್ತಿಯಲ್ಲಿ ಒಟ್ಟು 1.94ಲಕ್ಷ ಮಂದಿ ಕುಟುಂಬಶ್ರೀ ಸದಸ್ಯರಿದ್ದು, ಎಡಿಎಸ್, ಸಿಡಿಎಸ್, ಜಿಲ್ಲಾ ಮಟ್ಟದ ಸಮಿತಿ ನಿರ್ದೇಶನದೊಂದಿಗೆ ಚಟುವಟಿಕೆ ನಡೆಸುತ್ತಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಡಿಎಸ್ ಅಧ್ಯಕ್ಷೆ ಮುಮ್ತಾಸ್ ಅಬೂಬಕ್ಕರ್, ಕುಟುಂಬಶ್ರೀ ಮಿಷನ್ ಜಿಲ್ಲಾ ಪ್ರೋಗ್ರಾಂ ಮೆನೇಜರ್‍ಗಳಾದ ಶಿಬಿ ಇ, ರೇಶ್ಮಾ ಎಂ ಹಗೂ ತತಿಲೇಶ್ ಉಪಸ್ಥಿತರಿದ್ದರು.
ಕುಟುಂಬಶ್ರೀ ರಜತಮಹೋತ್ಸವ: ಇಂದು ನೆರೆಕರೆಕೂಟ ಸಂಗಮ'ಹೆಜ್ಜೆ-2023'ಕಾರ್ಯಕ್ರಮ
0
January 25, 2023