HEALTH TIPS

ಕಾಶ್ಮೀರ: 33 ವರ್ಷಗಳ ಬಳಿಕ ಚಿತ್ರಮಂದಿರ ಹೌಸ್‌ಫುಲ್‌

 

            ಶ್ರೀನಗರ: ಶಾರುಖ್‌ ಖಾನ್ ನಟನೆಯ 'ಪಠಾಣ್‌' ಸಿನಿಮಾ ವೀಕ್ಷಿಸಲು ಕಾಶ್ಮೀರ ಜನತೆ ಚಿತ್ರಮಂದಿರಗಳ ಮುಂದೆ ಸಾಲುಗಟ್ಟಿದ್ದು, 33 ವರ್ಷಗಳ ಬಳಿಕ ಕಣಿವೆ ನಾಡಿನಲ್ಲಿ ಚಿತ್ರಮಂದಿರಗಳು ಹೌಸ್‌ಫುಲ್‌ ಪ್ರದರ್ಶನ ಕಂಡ ಮೊದಲ ಚಿತ್ರವಾಗಿದೆ.

                  ಉಗ್ರರ ದಾಳಿ ಮತ್ತು ಬೆದರಿಕೆಯಿಂದ 3 ದಶಕಗಳ ಕಾಲ ಮುಚ್ಚಿದ್ದ ಚಿತ್ರ ಮಂದಿರಗಳು ಕಳೆದ ವರ್ಷ ಬಾಗಿಲು ತೆರೆದಿದ್ದವು.

                  ಬುಧವಾರ (ಡಿ.25) ಚಿತ್ರ ಬಿಡುಗಡೆಯಾದ ಮೊದಲ ದಿನವೇ ಹೌಸ್‌ಫುಲ್‌ ಪ್ರದರ್ಶನವಾಗಿದೆ. ಗಣರಾಜ್ಯೋತ್ಸವದ ದಿನ 7 ರಲ್ಲಿ 5 ಶೋ ಗಳು ಸಂಪೂರ್ಣ ಮಾರಾಟವಾಗಿದ್ದವು ಎಂದು ಕಾಶ್ಮೀರದಲ್ಲಿರುವ ಒಂದೇ ಒಂದು ಮಲ್ಟಿಪ್ಲೆಕ್ಸ್‌ನ ಮಾಲೀಕ ವಿಕಾಸ್‌ ಧರ್‌ ಹೇಳಿದ್ದಾರೆ.

               1989ರಲ್ಲಿ ಬಿಡುಗಡೆಯಾದ ಸನ್ನಿ ಡಿಯೋಲ್‌ ಅವರ 'ತ್ರಿದೇವ್‌' ಸಿನಿಮಾ ಹೌಸ್‌ಫುಲ್‌ ಪ್ರದರ್ಶನ ಕಂಡಿತ್ತು. ಆ ಬಳಿಕ ಈಗ ಪಠಾಣ್ ಅದರ ಸಾಲಿಗೆ ಸೇರಿದೆ ಎನ್ನುವುದು ಸಿನಿಮಾ ಪ್ರೇಮಿ ಮೊಮ್ಮದ ಇಕ್ಬಾಲ್‌ ಅವರ ಮಾತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries