HEALTH TIPS

ಹಿಂದುಳಿದವರ ಸಬಲೀಕರಣಕ್ಕೆ ಸರ್ಕಾರದಿಂದ ಶ್ರಮ: ಪ್ರಧಾನಿ ಮೋದಿ

 

             ಜೈಪುರ: 'ವಂಚಿತ್ ಕೋ ವರಿಯತಾ' (ಹಿಂದುಳಿದವರಿಗೆ ಆದ್ಯತೆ) ಎನ್ನುವ ಮಂತ್ರದೊಂದಿಗೆ ನಿರ್ಲಕ್ಷ್ಯಕ್ಕೊಳಗಾದ ಸಮಾಜದ ಪ್ರತಿಯೊಂದು ವರ್ಗವನ್ನು ಸಬಲೀಕರಣಗೊಳಿಸಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.

                   ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಗುರ್ಜರ್‌ ಸಮುದಾಯದ ಜನಪದ ದೇವರು ಭಗವಾನ್ ಶ್ರೀ ದೇವನಾರಾಯಣ ಅವರ 1,111 ನೇ ಅವತಾರ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

                         ಸ್ವಾತಂತ್ರ್ಯ ಹೋರಾಟ ಮತ್ತು ಇತರ ಚಳವಳಿಗಳಲ್ಲಿ ಗುರ್ಜರ್‌ ಸಮುದಾಯದ ಕೊಡುಗೆ ಅಪಾರ. ಇಂತಹ ವ್ಯಕ್ತಿಗಳಿಗೆ ದೇಶದಲ್ಲಿ ಸಿಗಬೇಕಾದ ಗೌರವ ಸಿಗದೇ ಇರುವುದು ದೌರ್ಭಾಗ್ಯವಾಗಿದೆ. ಆದರೆ ನವ ಭಾರತ ಹಿಂದೆ ಆದ ತಪ್ಪನ್ನು ಸರಿಪಡಿಸಲಿದೆ ಎಂದು ಹೇಳಿದರು.

                 ಭಾರತವನ್ನು ಸೈದ್ದಾಂತಿಕವಾಗಿ ಹಿಮ್ಮೆಟ್ಟಿಸಲು ಅನೇಕ ಪ್ರಯತ್ನಗಳು ನಡೆದರೂ ಅದು ಯಶಸ್ಸು ಕಾಣಲಿಲ್ಲ. ಭಾರತ ಕೇವಲ ಭೂಭಾಗವಲ್ಲ, ನಾಗರಿಕತೆ, ಸಂಸ್ಕೃತಿ, ಸಾಮರಸ್ಯ ಮತ್ತು ಸಾಮರ್ಥ್ಯದ ಅಭಿವ್ಯಕ್ತಿತ್ವವನ್ನು ಒಳಗೊಂಡಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು.

              ಭಾರತದ ಶಕ್ತಿ ಮತ್ತು ಪ್ರಾಬಲ್ಯವನ್ನು ಕಂಡು ಜಗತ್ತು ಈಗ ಹೊಸ ಆಶಾಭಾವನೆಯಿಂದ ನೋಡುತ್ತಿದೆ. ಭಾರತವು ಜಾಗತಿಕ ವೇದಿಕೆಗಳಲ್ಲಿ ತನ್ನನ್ನು ತಾನು ಪ್ರತಿಪಾದಿಸಿಕೊಂಡಿದೆ, ಜೊತೆಗೆ ಇತರ ದೇಶಗಳ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುತ್ತಿದೆ ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries