HEALTH TIPS

ಕುಂಬಳೆ ನಾಯ್ಕಾಪಿನಲ್ಲಿ ಎರಡು ಮನೆಗಳಿಂದ 33.4ಪವನು ಚಿನ್ನ, 33ಸಾವಿರ ರೂ, ನಗದು ಕಳವು



      ಕುಂಬಳೆ : ಕುಂಬಳೆ ಪೊಲೀಸ್ ಠಾಣೆ ವಯಾಪ್ತಿಯ ನಾಯ್ಕಾಪಿನಲ್ಲಿ ಎರಡು ಮನೆಗಳಿಗೆ ಹಾಡಹಗಲು ನುಗ್ಗಿದ ಕಳ್ಳರು ನಗ, ನಗದು ದೋಚಿದ್ದರೆ. ಎರಡು ಮನೆಗಳಿಂದಗಿ 33.4 ಪವನು ಚಿನ್ನ ಹಾಗೂ 33ಸಾವಿರ ರಊ. ನಗದು ಕಳವುಗೈಯಲಾಗಿದೆ. ನಾಯ್ಕಾಪು ಖಾಸಗಿ ಶಾಲೆಯೊಂದರ ಸನಿಹದ ನಿವಾಸಿ, ಕುಂಬಳೆಯ ಟೆಕ್ಸ್‍ಟೈಲ್ಸ್ ಮಾಲಿಕ ಮೋಹನ್‍ದಾಸ್ ಹಾಗೂ ಕರ್ನಾಟಕ ಬ್ಯಾಂಕ್ ನೀರ್ಚಾಲು ಶಾಖೆಯ ಸಪೆಶ್ಯಲ್ ಅಸಿಸ್ಟೆಂಟ್ ಆಫೀಸರ್ ವಾಸುದೇವ ಎಂಬವರ ಮನೆಯಿಂದ ಈ ಕಳವು ನಡೆದಿದೆ. ವಸುದೇವ ಅವರ ಮನೆಯಿಂದ 30ಪವನು ಚಿನ್ನಾಭರಣ, 11ಸಾವಿರ ರೂ. ನಗದು ಕಳವುಗೈಯಲಾಗಿದೆ. ಮೋಹನದಾಸ್ ಅವರ ಮನೆಯಿಂದ 3.4ಪವನು ಚಿನ್ನ ಮತ್ತು 22ಸಾವಿರ ರೂ. ನಗದು ಕಳವುಗೈಯಲಾಗಿದೆ. ಮನೆಯವರು ಶುಕ್ರವಾರ ಬೆಳಗ್ಗೆ ಹೊರಗೆ ತೆರಳಿದ್ದಾಗ  ಕಳವುನಡೆದಿದ್ದು, ಸಂಜೆ ವಾಪಸಾದಾಗ ಕೃತ್ಯ ಬೆಳಕಿಗೆ ಬಂದಿದೆ.
           ವಾಸುದೇವ ಅವರ ಗೋಡೆಯ ಕಿಟಿಕಿ ಕಳಚಿ ತೆಗೆದು ನುಗ್ಗಿ ಬೆಡ್‍ರೂಮ್‍ನೊಳಗಿದ್ದ ಕಪಾಟಿನಿಂದ ನಗ, ನಗದು ದೋಚಲಾಗಿದೆ. ಮೋಹನದಸ್ ಅವರ ಮನೆಯ ಬೀಗವನ್ನು ಕಬ್ಬಿಣದ ಸಲಾಕೆಯಿಂದ ಒಡೆದು ನುಗ್ಗಿ, ಚಿನ್ನಾಭರಣ, ನಗದು ದೋಚಿದ್ದಾರೆ.ಕುಂಬಳೆ ಠಾಣೆ ಇನ್ಸ್‍ಪೆಕ್ಟರ್ ಇ. ಅನೂಪ್ ನೇತೃತ್ವದ ಪೊಲೀಸರ ತಂಡ, ಬೆರಳಚ್ಚು ತಜ್ಞರು ಹಾಗೂ ಶ್ವನದಳ ಆಗಮಿಸಿ ತಪಾಸಣೆ ನಡೆಸಿದೆ. ಕುಂಬಳೆ ಪೊಲೀಸ್ ಠಾಣೆ ವಯಾಪ್ತಿಯಲ್ಲಿ ಕಳೆದ ಒಂದೆರಡು ತಿಂಗಳಲ್ಲಿ ಕಳವು ಕೃತ್ಯ ಹೆಚ್ಚಾಗಿದ್ದು, ಒಂದು ತಿಂಗಳಲ್ಲಿ ಐದನೇ ಕಳವು ಪ್ರಕರಣ ಇದಾಗಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries