ತಿರುವನಂತಪುರಂ: ಪತ್ತನಂತಿಟ್ಟ ಜಿಲ್ಲಾಧಿಕಾರಿ ದಿವ್ಯಾ ಎಸ್.ಎಸ್.ಅಯ್ಯರ್ ಅವರು ದೇಶದ ಅತ್ಯುತ್ತಮ ಜಿಲ್ಲಾಧಿಕಾರಿಯಾಗಿ ಪಡೆದ ಪ್ರಶಸ್ತಿ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಸ್ತಾಂತರಿಸಿದ್ದಾರೆ.
ದಿವ್ಯಾ ಅವರು ಒಂದು ಲಕ್ಷ ರೂಪಾಯಿಯನ್ನು ಪರಿಹಾರ ನಿಧಿಗೆ ಹಸ್ತಾಂತರಿಸಿದರು. ಈ ಬಗ್ಗೆ ಸ್ವತಃ ದಿವ್ಯಾ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ದಿವ್ಯಾ ಎಸ್ ಅಯ್ಯರ್ ಅವರು ಅಧಿಕೃತ ಸಭೆಗಳ ನಂತರ ಮುಖ್ಯಮಂತ್ರಿಯನ್ನು ಭೇಟಿಯಾದರು ಮತ್ತು ಅವರ ಪುತ್ರ ಸಹಿತ ಕುಟುಂಬ ಸದಸ್ಯರು ಜೊತೆಗಿದ್ದರು.
'ತಿರುವನಂತಪುರದಲ್ಲಿ ಅಧಿಕೃತ ಸಭೆಗಳ ನಂತರ, ಮುಖ್ಯಮಂತ್ರಿಗಳನ್ನು ಸಂಜೆ ಅವರ ನಿವಾಸದಲ್ಲಿ ಭೇಟಿ ಮಾಡಿದೆ. ನಿನ್ನೆ ಲಭಿಸಿರುವ ಇಂಡಿಯನ್ ಎಕ್ಸ್ ಪ್ರೆಸ್ "ಎಕ್ಸಲೆನ್ಸ್ ಇನ್ ಗುಡ್ ಗವರ್ನೆನ್ಸ್" ಪ್ರಶಸ್ತಿಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿಗಳನ್ನು ಹಸ್ತಾಂತರಿಸಲಾಗಿದೆ. ಮತ್ತು ಕುತೂಹಲದಿಂದ ಪುಟಾಣಿ ಪುತ್ರ ಮತ್ತು ನನ್ನ ತಂದೆ ಮತ್ತು ತಾಯಿ ಜೊತೆಗಿದ್ದರು. ಮುಖ್ಯಮಂತ್ರಿ ಮತ್ತು ಅವರ ಕುಟುಂಬದವರು ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದರು. ಮೊತ್ತವನ್ನು ಹಸ್ತಾಂತರಿಸುವಾಗ ಪ್ರಶಸ್ತಿ ಬಂದ ಖುಷಿಯನ್ನು ಹಂಚಿಕೊಂಡ ಅವರು, ಪುಟಾಣಿಗೆ ಶೇಕ್ ಹ್ಯಾಂಡ್ ಮತ್ತು ಅವರ ಮುತ್ತಿನ ಹಾರವನ್ನು ಸ್ವೀಕರಿಸುವ ಮೂಲಕ ಸಿಹಿ ಸಂಜೆಯನ್ನು ಸ್ಮರಣೀಯವಾಗಿಸಿದರು ಮತ್ತು ಮುಂದಿನ ಪ್ರಯತ್ನಕ್ಕೆ ಮುಂದಾದರು….ಎಂದು ದಿವ್ಯಾ ಎಸ್ ಅಯ್ಯರ್ ಫೇಸ್ ಬುಕ್ ಪೆÇೀಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಉತ್ತಮ ಡಿ.ಸಿ. ಪ್ರಶಸ್ತಿ ಮೊತ್ತವನ್ನು ಪರಿಹಾರ ನಿಧಿಗೆ ಹಸ್ತಾಂತರ: ದಿವ್ಯಾ ಎಸ್ ಅಯ್ಯರ್ ರಿಂದ ಮಾಹಿತಿ
0
ಜನವರಿ 24, 2023
Tags


