HEALTH TIPS

'ಭಾರತ ಮಾತಾಕಿ ಜೈ' ಎಂದು ಕೂಗುವುದು ದೇಶಭಕ್ತಿಯಲ್ಲ: ಹೊಸಬಾಳೆ

 

              ಸುಲ್ತಾನ್‌ಪುರ: 'ಭಾರತ ಮಾತಾಕಿ ಜೈ' ಎಂದು ಕೂಗುವುದು ದೇಶಭಕ್ತಿ ಅಲ್ಲ. ದೇಶಭಕ್ತರಾಗುವುದಕ್ಕೆ ನಿಸ್ವಾರ್ಥ ಸೇವೆಯ ಅಗತ್ಯ ಇದೆ' ಎಂದು ಆರ್‌ಎಸ್‌ಎಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಶುಕ್ರವಾರ ಅಭಿಪ್ರಾಯಪಟ್ಟರು.

      ಶ್ರೀರಾಮನ ಹೆಸರಿನಿಂದ ಜನರ ಉನ್ನತಿಯಾಗಿಲ್ಲ. ಆದರೆ, ರಾಮನ ಕೆಲಸಗಳು ಜನರನ್ನು ಉನ್ನತೀಕರಿಸಿವೆ ಎಂದು ಹೊಸಬಾಳೆ ಅವರು ಉದಾಹರಣೆ ನೀಡಿದರು.

             'ಮಕರ ಸಂಕ್ರಾಂತಿ' ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, 'ಶ್ರೀಕೃಷ್ಣನ ಹಿರಿಮೆ, ಶ್ರೀರಾಮನ ಗರಿಮೆಗಳನ್ನು ಜನರು ತಮ್ಮ ವರ್ತನೆಯಲ್ಲಿ ರೂಢಿಸಿಕೊಂಡರೆ ಮಾತ್ರವೇ ಕೃಷ್ಣ, ರಾಮರು ಜನರ ಮಧ್ಯೆ ಇರುತ್ತಾರೆ' ಎಂದರು.

               'ಭಾರತ ಮಾತಾಕಿ ಜೈ' ಎಂದು ಕೂಗಿದರೆ ದೇಶಭಕ್ತಿ ಇದೆ ಎಂದು ಅರ್ಥವಲ್ಲ. ಜೀವನದಲ್ಲಿ ಕಠಿಣ ಪರಿಶ್ರಮ ಪಡುವ ವ್ಯಕ್ತಿಗೆ ಮಾತ್ರವೇ ಭಾರತ್‌ ಮಾತಾಕಿ ಜೈ ಎಂದು ಹೇಳುವ ನೈತಿಕ ಹಕ್ಕಿದೆ' ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries