ಕಾಸರಗೋಡು:ರಾಷ್ಟ್ರೀಯ ಆಯುಷ್ ಮಿಷನ್ ಅಧೀನದ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಾಗಿ
ಬಡ್ತಿ ಪಡೆದ ಹೋಮಿಯೋ ಆಯುರ್ವೇದ ಡಿಸ್ಪೆನ್ಸರಿಗಳಲ್ಲಿ ಯೋಗ ಬೋಧಕರ ಖಾಲಿ ಹುದ್ದೆ. ಬಿ
ಎನ್ ವೈ ಎಸ್ , ಬಿ ಎ ಎಂ ಎಸ್ , ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ / ಸರಕಾರ
ಅಂಗೀಕರಿಸಿದ ಎಂ ಎಸ್ಸಿ ಯೋಗ, ಒಂದು ವರ್ಷಕ್ಕಿಂತ ಕಡಿಮೆಯಿಲ್ಲದ ಪಿ ಜಿ ಡಿಪ್ಲೊಮಾ
ಸರ್ಟಿಫಿಕೇಟ್ ಕೋರ್ಸ್ ಎಂಬೀ ಯೋಗ್ಯತೆಗಳಿರುವವರು ಅರ್ಜಿ ಸಲ್ಲಿಸಬಹುದು. ವಯೋಮಿತಿ
50. ಸಂಸ್ಥೆಯು ಇರುವ ಪಂಚಾಯತ್ ವ್ಯಾಪ್ತಿಯಲ್ಲಿರುವ ಅಭ್ಯರ್ಥಿಗಳಿಗೆ ಆದ್ಯತೆ.
ಅರ್ಜಿಯನ್ನು ಸ್ವೀಕರಿಸುವ ಕೊನೆಯ ದಿನಾಂಕ ಜನವರಿ 31 ರಂದು ಸಂಜೆ 5 ಗಂಟೆಗೆಯ ವರೆಗೆ.
ಸರಕಾರಿ ಆಯುರ್ವೇದ ಆಸ್ಪತ್ರೆ, ಪಡನ್ನಕ್ಕಾಡ್ ನಲ್ಲಿರುವ ರಾಷ್ಟ್ರೀಯ ಆಯುಷ್ ಮಿಷನ್
ಕಛೇರಿಗೆ ಅರ್ಜಿಯನ್ನು ನೀಡಬೇಕು. ಫೆಬ್ರವರಿ 1 ರಂದು ಬೆಳಗ್ಗೆ 10 ಗಂಟೆಗೆ ರಾಷ್ಟ್ರೀಯ
ಆಯುಷ್ ಮಿಷನ್ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ದೂರವಾಣಿ 9188807956.