HEALTH TIPS

ವಿದ್ಯುತ್ ದರ ಏರಿಕೆ; ನಾಲ್ಕು ತಿಂಗಳವರೆಗೆ ಪ್ರತಿ ಯೂನಿಟ್‍ಗೆ ಒಂಬತ್ತು ಪೈಸೆ ಹೆಚ್ಚುವರಿ ಶುಲ್ಕ


                  ತಿರುವನಂತಪುರಂ: ನಾಲ್ಕು ತಿಂಗಳವರೆಗೆ ಪ್ರತಿ ಯೂನಿಟ್ ವಿದ್ಯುತ್ ಗೆ ಒಂಬತ್ತು ಪೈಸೆ ಹೆಚ್ಚು ವಿಧಿಸಲು ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ ಅನುಮತಿ ನೀಡಿದೆ.
         ಪರಿಷ್ಕøತ ಇಂಧನ ಹೆಚ್ಚುವರಿ ಶುಲ್ಕವನ್ನು ಫೆಬ್ರವರಿ 1 ರಿಂದ ಮೇ 31 ರವರೆಗೆ ನಾಲ್ಕು ತಿಂಗಳವರೆಗಿನ ಬಿಲ್ ಆಧಾರದಲ್ಲಿ ಸರ್ ಚಾರ್ಜ್  ವಿಧಿಸಲಾಗುತ್ತದೆ.
            2022ರ ಏಪ್ರಿಲ್‍ನಿಂದ ಜೂನ್‍ವರೆಗೆ ಗ್ರಾಹಕರಿಗೆ 87 ಕೋಟಿ ರೂ.ಗಳ ಹೆಚ್ಚುವರಿ ಶುಲ್ಕವನ್ನು(ಸರ್ ಚಾರ್ಜ್)  ವಿಧಿಸಲಾಗಿದ್ದು, ಇದು ವಿದ್ಯುತ್ ಖರೀದಿಯ ಹೆಚ್ಚುವರಿ ವೆಚ್ಚವಾಗಿದೆ. ಮಂಡಳಿಯು ಪ್ರತಿ ಯೂನಿಟ್‍ಗೆ 14 ಪೈಸೆ ವಿಧಿಸಲು ಬಯಸಿದೆ. ಆದರೆ ನಿಯಂತ್ರಣ ಆಯೋಗ ಇದನ್ನು ಒಪ್ಪಲಿಲ್ಲ.
          ಈ ಆದೇಶದ ಜೊತೆಗೆ ಹಿಂದಿನ ಅವಧಿಗಳಲ್ಲಿ ಇಂಧನ ಹೆಚ್ಚುವರಿ ಶುಲ್ಕ ವಿಧಿಸಲು ಮಂಡಳಿ ಸಲ್ಲಿಸಿದ್ದ ಅರ್ಜಿಗಳನ್ನು ಆಯೋಗ ತಿರಸ್ಕರಿಸಿದೆ. ಅಕ್ಟೋಬರ್‍ನಿಂದ ಡಿಸೆಂಬರ್ 2021 ರವರೆಗಿನ ಹೆಚ್ಚುವರಿ ವೆಚ್ಚ 18.10 ಕೋಟಿಗಳು. 2022ರ ಜನವರಿಯಿಂದ ಮಾರ್ಚ್‍ವರೆಗೆ 16.05 ಕೋಟಿ ರೂ.ಆಗಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries