HEALTH TIPS

ಕೊಲ್ಲಂನಿಂದ ಬಂಧಿಸಲ್ಪಟ್ಟ ಭಯೋತ್ಪಾದಕ ಪಿ.ಎಫ್.ಐ.ರಾಷ್ಟ್ರೀಯ ನಾಯಕತ್ವಕ್ಕಾಗಿ ಹಿಟ್‍ಲಿಸ್ಟ್ ಸಿದ್ಧಪಡಿಸಿದ್ದ: ಕೇರಳದಲ್ಲಿ ಹೆಚ್ಚು ಸದಸ್ಯರ ಸೇರ್ಪಡೆ: ಎನ್‍ಐಎಗೆ ಮಹತ್ವದ ಮಾಹಿತಿ ಲಭ್ಯ


               ನವದೆಹಲಿ: ಕೊಲ್ಲಂ ಚವರದಿಂದ ಬಂಧಿತನಾಗಿರುವ ಪಾಪ್ಯುಲರ್ ಫ್ರಂಟ್ ಭಯೋತ್ಪಾದಕ ಮುಹಮ್ಮದ್ ಸಾದಿಕ್ ಪಿಎಫ್ ಐ ರಾಷ್ಟ್ರೀಯ ನಾಯಕತ್ವಕ್ಕೆ ಹಿಟ್ ಲಿಸ್ಟ್ ಸಿದ್ಧಪಡಿಸಿದ್ದಾನೆ ಎಂದು ತಿಳಿದುಬಂದಿದೆ.
          ಕೇರಳದಲ್ಲಿ ಪಿಎಫ್‍ಐ ವರದಿಗಾರರಾಗಿ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿಯೂ ಸೂಚಿಸಲಾಗಿದೆ. ಪಿಎಫ್‍ಐ ವರದಿಗಾರರ ಚಟುವಟಿಕೆಗಳು ಗೌಪ್ಯವಾಗಿದ್ದು, ಸಮಾಜದಲ್ಲಿ ಹೆಚ್ಚು ಸಕ್ರಿಯವಾಗಿಲ್ಲ ಎಂಬ ಮಾಹಿತಿಯೂ ಎನ್‍ಐಎಗೆ ಲಭಿಸಿದೆ.
           ಕೊಲ್ಲಂನಲ್ಲಿ ಬಂಧಿತನಾಗಿರುವ ಮಹಮ್ಮದ್ ಸಾದಿಕ್ ಪಿಎಫ್‍ಐ ವರದಿಗಾರನಾಗಿ ಕೆಲಸ ಮಾಡುತ್ತಿದ್ದ. ಆತ ಕೊಲ್ಲಂ ಮತ್ತು ತಿರುವನಂತಪುರಂ ಜಿಲ್ಲೆಗಳಲ್ಲಿ ಆರ್‍ಎಸ್‍ಎಸ್ ಪದಾಧಿಕಾರಿಗಳು ಮತ್ತು ಬಿಜೆಪಿ ಮುಖಂಡರ ಮಾಹಿತಿ ಸಂಗ್ರಹಿಸಿ ಹಸ್ತಾಂತರಿಸಿದ್ದ. ಆರ್ ಎಸ್ ಎಸ್ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಮಾಹಿತಿಯನ್ನೂ ರವಾನಿಸಿದ್ದ ಎಂದು ವರದಿಯಾಗಿದೆ. ಕಾರ್ಯಕ್ರಮದ ಪೋಸ್ಟರ್‍ಗಳನ್ನು ಪಿಎಫ್‍ಐ ರಾಷ್ಟ್ರೀಯ ನಾಯಕತ್ವಕ್ಕೆ ತಲುಪಿಸುತ್ತಿದ್ದ. ಮುಹಮ್ಮದ್ ಸಾದಿಕ್ ಹಣ್ಣು ಮಾರುವ ನೆಪದಲ್ಲಿ ಕುಟುಂಬ ಸಮೇತನಾÀಗಿ ಜೀವನ ನಡೆಸುತ್ತಿದ್ದ. ಸದ್ಯ ಎನ್‍ಐಎ ವಶದಲ್ಲಿದ್ದಾನೆ. ಕಳೆದ ಜನವರಿ 17ರಂದು ಎನ್‍ಐಎ ನಡೆಸಿದ ದಾಳಿ ವೇಳೆ ಉಗ್ರರ ಮನೆಯಿಂದ ಹಿಟ್‍ಲಿಸ್ಟ್ ಪತ್ತೆಯಾಗಿತ್ತು.
           ಕೇರಳದಿಂದ ಎನ್‍ಐಎ ವಶಕ್ಕೆ ಪಡೆದಿರುವ ಹೇಡಿಗಳ ವಿರುದ್ಧ ರಿಮಾಂಡ್ ವರದಿಯಲ್ಲಿ ಗಂಭೀರವಾದ ಅಂಶಗಳಿವೆ. ರಿಮಾಂಡ್ ವರದಿಯಲ್ಲಿರುವ ಪ್ರಮುಖ ಅಂಶವೆಂದರೆ ಪಾಪ್ಯುಲರ್ ಫ್ರಂಟ್ ಕೋಮುಗಲಭೆ ಸೃಷ್ಟಿಸಲು ಯತ್ನಿಸಿದೆ. ಇಸ್ಲಾಮಿಕ್ ಸ್ಟೇಟ್, ಲಷ್ಕರ್-ಎ-ತೊಯ್ಬಾ ಮತ್ತು ಅಲ್-ಖೈದಾ ಮುಂತಾದ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳೊಂದಿಗೆ ನಾಯಕರಿಗೆ ಸಂಪರ್ಕವಿದೆ ಎಂದು ರಿಮಾಂಡ್ ವರದಿಯಲ್ಲಿ ಹೇಳಲಾಗಿದೆ. ಎನ್‍ಐಎ ವರದಿ ಪ್ರಕಾರ, ಭಯೋತ್ಪಾದಕರು ಕೇರಳದ ಯುವಕರನ್ನು ಇಂತಹ ಭಯೋತ್ಪಾದಕ ಸಂಘಟನೆಗಳತ್ತ ಸೆಳೆಯುವ ಚಟುವಟಿಕೆಗಳಲ್ಲಿ ತೊಡಗಿದ್ದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries