HEALTH TIPS

Whatsapp : ಗುಣಮಟ್ಟದ ಫೋಟೊ ಕಳುಹಿಸಲು ಹೊಸ ಅಪ್‌ಡೇಟ್

 

              ಬೆಂಗಳೂರು: ವಾಟ್ಸ್‌ಆಯಪ್ ಮೂಲಕ ಕಳುಹಿಸಲಾಗುವ ಫೋಟೊಗಳ ಗುಣಮಟ್ಟ ಕಡಿಮೆಯಾಗುವುದು ಸಾಮಾನ್ಯ ಸಂಗತಿ. ಈ ಬಗ್ಗೆ ಬಳಕೆದಾರರು ಸದಾ ದೂರುತ್ತಲೇ ಇರುತ್ತಾರೆ. ಅಲ್ಲದೆ, ಫೋಟೊಗಳನ್ನು ಬೇಗನೆ ಹೆಚ್ಚು ಫೈಲ್ ಗಾತ್ರವಿಲ್ಲದೇ ಕಳುಹಿಸಬೇಕು ಎನ್ನುವ ಉದ್ದೇಶದಿಂದ ಈ ಕ್ರಮ ಬಳಕೆಯಲ್ಲಿದೆ.

                ಆದರೆ, ಗುಣಮಟ್ಟದಲ್ಲಿ ವ್ಯತ್ಯಾಸವಾಗದೇ ಇರುವ ಫೋಟೊ ಕಳುಹಿಸಬೇಕು ಎಂದಾದರೆ, ಅದಕ್ಕೆ ಡಾಕ್ಯುಮೆಂಟ್ ಫೀಚರ್ ಬಳಸಿ, ಕಳುಹಿಸಬಹುದು.

                  ಅದ್ಯಾವುದರ ತೊಂದರೆ ಬೇಡ ಎನ್ನುವ ಉದ್ದೇಶದಿಂದ, ವಾಟ್ಸ್‌ಆಯಪ್, ಮೂಲ ಫೋಟೊವನ್ನು, ಅದೇ ಫೈಲ್ ಸೈಜ್, ಗುಣಮಟ್ಟದೊಂದಿಗೆ ಕಳುಹಿಸುವ ಆಯ್ಕೆಯನ್ನು ಬಳಕೆದಾರರಿಗೆ ಒದಗಿಸುತ್ತಿದೆ.

                  ಈ ಬಗ್ಗೆ ವಾಟ್ಸ್‌ಆಯ‍ಪ್ ಪರಿಶೀಲನೆ ನಡೆಸುತ್ತಿದ್ದು, ಆಯಂಡ್ರಾಯ್ಡ್ ಬೀಟಾ ವಿ2.23.2.11 ರಲ್ಲಿ ಹೊಸ ಫೀಚರ್ ಅನ್ನು ಪರೀಕ್ಷಿಸಲಾಗುತ್ತಿದೆ. ಹೊಸ ಫೀಚರ್ ಮೂಲಕ, ಬಳಕೆದಾರರು ಫೋಟೊ ಕಳುಹಿಸುವಾಗ, ಅದರಲ್ಲಿ ಫೈಲ್ ಗಾತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಫೋಟೊ ಕ್ಲಾರಿಟಿಯಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಫೈಲ್ ಕಳುಹಿಸಲು ನೂತನ ಅಪ್‌ಡೇಟ್‌ನಲ್ಲಿ ಅವಕಾಶ ದೊರೆಯಲಿದೆ. ಪರೀಕ್ಷಾರ್ಥ ಬಳಕೆಯ ನಂತರ ಎಲ್ಲ ಬಳಕೆದಾರರಿಗೂ ಹೊಸ ಫೀಚರ್ ಅಪ್‌ಡೇಟ್ ಮೂಲಕ ಲಭ್ಯವಾಗಲಿದೆ ಎಂದು ವಾಬೀಟಾ ಇನ್ಫೋ ವರದಿ ಮಾಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries