HEALTH TIPS

ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಇಂದಿನಿಂದ 2 ದಿನ ಭಾರತ ಪ್ರವಾಸ

        ನವದೆಹಲಿ : ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವೆ ಮೆಲಾನಿ ಜೋಲಿ ಫೆಬ್ರವರಿ 6 ರಿಂದ 7 ರವರೆಗೆ ಭಾರತಕ್ಕೆ ತನ್ನ ಮೊದಲ ಅಧಿಕೃತ ಪ್ರವಾಸವನ್ನು ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.

              " ಭಾರತಕ್ಕೆ ನನ್ನ ಮೊದಲ ಅಧಿಕೃತ ಪ್ರವಾಸಕ್ಕೆ ಹೊರಡುತ್ತಿರುವಾಗ, ನಮ್ಮ ಇಂಡೋ-ಪೆಸಿಫಿಕ್ ಕಾರ್ಯತಂತ್ರವನ್ನು ಕಾರ್ಯರೂಪಕ್ಕೆ ತರುವ ಮೂಲಕ ಸಂಬಂಧವನ್ನು ಬಲಪಡಿಸಲು ಎದುರು ನೋಡುತ್ತಿದ್ದೇನೆ ಎಂದು ಜೋಲಿ ಟ್ವೀಟ್ ಮಾಡಿದ್ದಾರೆ.


        ದೆಹಲಿಯಲ್ಲಿ, ಇಂಡೋ-ಪೆಸಿಫಿಕ್ ಕಾರ್ಯತಂತ್ರದಡಿ ಭಾರತದೊಂದಿಗೆ ಕೆನಡಾದ ಸಂಬಂಧ ಹೆಚ್ಚಿಸಲು ಹಾಗೂ ಉಭಯ ದೇಶಗಳಿಗೆ ಬೆಳವಣಿಗೆ ಮತ್ತು ಸಮೃದ್ಧಿಗೆ ಅವಕಾಶಗಳನ್ನು ಸೃಷ್ಟಿಸಲು ಜೋಲಿ ತಮ್ಮ ಭಾರತೀಯ ಸಹವರ್ತಿ ಎಸ್ ಜೈಶಂಕರ್ ಅವರನ್ನು ಭೇಟಿಯಾಗಲಿದ್ದಾರೆ.

            ಇಂಡೋ-ಪೆಸಿಫಿಕ್ ಕಾರ್ಯತಂತ್ರದಡಿ  ಭಾರತದೊಂದಿಗೆ ಕೆನಡಾದ ದೃಢವಾದ ಕಾರ್ಯಸೂಚಿಗೆ ಸಂಬಂಧಿಸಿದಂತೆ ಜೋಲಿ ಭಾರತದಲ್ಲಿನ ಉದ್ಯಮಿಗಲು ಮತ್ತು ನಾಗರಿಕ ಸಮಾಜದ ಸಮುದಾಯಗಳಲ್ಲಿನ ಪ್ರಮುಖ ಪಾಲುದಾರರೊಂದಿಗೆ ಮಾತುಕತೆ ನಡೆಸಲಿದ್ದಾರೆ.

      ಕೆನಡಾ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದ ನಡುವೆ  ಹೆಚ್ಚು ಮುಕ್ತ ಮತ್ತು ಸಮೃದ್ಧ ಪಾಲುದಾರಿಕೆಗಾಗಿ ಅವೇಗವನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

Simply put: there is an increasing demand in India for what we make and grow here in Canada. I look forward to my first official visit to India to strengthen our engagement and ensure Canadians can tap into all the opportunities the Indo-Pacific has to offer.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries