HEALTH TIPS

ರಾಯಪುರದಲ್ಲಿ ನಡೆಯಲಿರುವ ಕಾಂಗ್ರೆಸ್‌ 85ನೇ ಮಹಾ ಅಧಿವೇಶನ ಭಾರತದ ರಾಜಕೀಯದಲ್ಲಿ ಬದಲಾವಣೆ ತರಲಿದೆ: ಕೆಸಿ ವೇಣುಗೋಪಾಲ್

 

               ರಾಯಪುರ: ಫೆಬ್ರುವರಿ 24ರಿಂದ ರಾಯಪುರದಲ್ಲಿ ನಡೆಯಲಿರುವ ಪಕ್ಷದ ಮೂರು ದಿನಗಳ 85ನೇ ಸರ್ವಸದಸ್ಯರ ಮಹಾ ಅಧಿವೇಶನವು ಭಾರತದ ರಾಜಕೀಯಕ್ಕೆ 'ಗೇಮ್ ಚೇಂಜರ್' ಆಗಲಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನಾ) ಕೆ.ಸಿ. ವೇಣುಗೋಪಾಲ್‌ ತಿಳಿಸಿದ್ದಾರೆ.

                ಛತ್ತೀಸಗಢದ ರಾಯಪುರದಲ್ಲಿ ಫೆಬ್ರುವರಿ 24ರಿಂದ 26ರವರೆಗೆ ನಡೆಯಲಿರುವ ಮೂರು ದಿನಗಳ ಎಐಸಿಸಿ ಮಹಾ ಅಧಿವೇಶನದಲ್ಲಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಗೆ (ಸಿಡಬ್ಲ್ಯುಸಿ) ಚುನಾವಣೆ ನಡೆಯಲಿದೆ ಎಂದು ಕಾಂಗ್ರೆಸ್‌ ಸೋಮವಾರ ಹೇಳಿದೆ.

                    ಪಕ್ಷದ ಹಿರಿಯ ನಾಯಕರಾದ ಪವನ್ ಬನ್ಸಾಲ್ ಮತ್ತು ತಾರಿಕ್ ಅನ್ವರ್ ಅವರೊಂದಿಗೆ ವೇಣುಗೋಪಾಲ್ ಅವರು ಛತ್ತೀಸ್‌ಗಢದ ರಾಜಧಾನಿಗೆ ಆಗಮಿಸಿ ನವ ರಾಯಪುರದ ರಾಜ್ಯೋತ್ಸವ ಸ್ಥಳದಲ್ಲಿ ನಡೆಯಲಿರುವ ಮಹಾ ಅಧಿವೇಶನದ ಸಿದ್ಧತೆಗಳನ್ನು ಪರಿಶೀಲಿಸಿದರು.

               ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವೇಣುಗೋಪಾಲ್, ಫೆಬ್ರುವರಿ 24 ರಿಂದ 26ರವರೆಗೆ ನಡೆಯಲಿರುವ ಸರ್ವಸದಸ್ಯರ ಸಭೆಯ ಸಿದ್ಧತೆಗಳನ್ನು ಪರಿಶೀಲಿಸಲು ನಾವು ಇಲ್ಲಿಗೆ ಬಂದಿದ್ದೇವೆ. ಈ ಅಧಿವೇಶನವು ಭಾರತದ ರಾಜಕಾರಣದ ಗೇಮ್ ಚೇಂಜರ್ ಆಗಲಿದೆ ಎಂದರು. 

                  ಕೇಂದ್ರದ ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು ಗುರಿಯಾಗಿಸಿಕೊಂಡು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬಿಜೆಪಿ ದೇಶದಲ್ಲಿ ಸುಳ್ಳುಗಳನ್ನು ಮಾತ್ರ ಹರಡುತ್ತಿದೆ ಎಂದ ಅವರು, ಭಾರತ್ ಜೋಡೋ ಯಾತ್ರೆ ಬಗ್ಗೆಯೂ ಮಾತನಾಡಿದರು
ಯಾತ್ರೆಯು ದೇಶದ ಅತಿದೊಡ್ಡ ರಾಜಕೀಯ ಚಳುವಳಿಗಳಲ್ಲಿ ಒಂದಾಯಿತು. ಇದಕ್ಕೆ ಇಡೀ ಬಿಜೆಪಿಯೇ ವಿರೋಧ ವ್ಯಕ್ತಪಡಿಸಿತ್ತು. ಬಿಜೆಪಿಯವರು ರಾಜಕೀಯ ಮಾಡುತ್ತಾರೆ ಎಂದು ದೂರಿದರು.

                    ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು 2022ರ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು ಮತ್ತು 2023ರ ಜನವರಿ 30 ರಂದು ಶ್ರೀನಗರದಲ್ಲಿ ಮುಕ್ತಾಯವಾಯಿತು.

              ವೇಣುಗೋಪಾಲ್, ಬನ್ಸಾಲ್ ಮತ್ತು ಅನ್ವರ್ ಭಾನುವಾರ ರಾಯಪುರ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ, ಅವರನ್ನು ಸ್ವಾಗತಿಸಲು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಅವರ ಸಂಪುಟ ಸಹೋದ್ಯೋಗಿಗಳು ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಮೋಹನ್ ಮಾರ್ಕಮ್ ಸೇರಿದ್ದರು.

               ಕಾಂಗ್ರೆಸ್‌ನ ಸರ್ವಸದಸ್ಯರ ಅಧಿವೇಶನ ನಡೆಯುವ ಸ್ಥಳಕ್ಕೆ ಭೇಟಿ ನೀಡಿದರು. ನಂತರ ಸಿದ್ಧತೆ ಕುರಿತು ಸಭೆ ನಡೆಸಲಾಯಿತು.

             ಮೂರು ದಿನಗಳ ಬೃಹತ್ ಸಮಾವೇಶದಲ್ಲಿ ದೇಶದಾದ್ಯಂತ ಇರುವ ಪಕ್ಷದ ಹಿರಿಯ ನಾಯಕರು ಭಾಗವಹಿಸಲಿದ್ದು, ಎಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಪ್ರತಿನಿಧಿಗಳು ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷ ಸ್ಥಾನವನ್ನು ಅಂಗೀಕರಿಸಲಿದ್ದಾರೆ.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries