HEALTH TIPS

ಇಂಧನ ಸೆಸ್ ಮತ್ತು ಕುಡಿ ನೀರು ಬೆಲೆ ಹೆಚ್ಚಳದ ಬಳಿಕ ಮುಂದಿನ ಬ್ಲ್ಯಾಕೌಟ್; ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಸರ್ಕಾರ 6000 ಕೋಟಿ ಕಟ್ಟಡ ಕಾರ್ಮಿಕರ ಸೆಸ್ ಸಂಗ್ರಹಿಸಲು ಮುಂದಾದ ಸರ್ಕಾರ: ಕಟ್ಟಡ ಮಾಲೀಕರಿಗೆ ನೋಟಿಸ್!


          ತಿರುವನಂತಪುರಂ: ಇಂಧನ ಸೆಸ್ ಮತ್ತು ಕುಡಿಯುವ ನೀರಿನ ದರ ಹೆಚ್ಚಳ  ನಂತರ ಸರ್ಕಾರ ಜನರನ್ನು ಮತ್ತಷ್ಟ ಹಿಂಡಲು ಪ್ರಯತ್ನದಲ್ಲಿದೆ.
           ಆರ್ಥಿಕ ಬಿಕ್ಕಟ್ಟನ್ನು ನೀಗಿಸಲು ಸರ್ಕಾರವು ಸ್ಥಳೀಯ ಸಂಸ್ಥೆಗಳಿಗೆ ಬಾಕಿ ಇರುವ 6000 ಕೋಟಿ ಕಟ್ಟಡ ಕಾರ್ಮಿಕರ ಸೆಸ್ ಸಂಗ್ರಹಿಸಲು ಸೂಚಿಸಿದೆ. ಇದಕ್ಕಾಗಿ ವಿಶೇಷ ಸಾಫ್ಟ್‍ವೇರ್ ಸಿದ್ಧಪಡಿಸಲಾಗಿದೆ.
            ಸಂಗ್ರಹಣೆಯ ಹೊಣೆಯನ್ನು ಸ್ಥಳೀಯಾಡಳಿತ ಸಂಸ್ಥೆಗಳಿಗೆ ವಹಿಸಲಾಗಿದೆ. ಈಗಾಗಲೇ ಸುಮಾರು 6 ಲಕ್ಷ ಕಟ್ಟಡ ಮಾಲೀಕರಿಗೆ ನೋಟಿಸ್ ಕಳುಹಿಸಲಾಗಿದೆ. 2005ರವರೆಗೆ ಕಾರ್ಮಿಕ ಅಧಿಕಾರಿಗಳ ನಿಯಂತ್ರಣದಲ್ಲಿ ಸೆಸ್ ಸಂಗ್ರಹಿಸಲಾಗುತ್ತಿತ್ತು. ಆದರೆ ಕಾರ್ಮಿಕ ಅಧಿಕಾರಿಗಳು ದಕ್ಷತೆಯಿಂದ ಕರ್ತವ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಮಂಡಳಿ ಹಾಗೂ ಕಾರ್ಮಿಕ ಸಂಘಟನೆಗಳು ಮಧ್ಯ ಪ್ರವೇಶಿಸಿ ಸೆಸ್ ಸಂಗ್ರಹವನ್ನು ಸ್ಥಳೀಯ ಸಂಸ್ಥೆಗಳಿಗೆ ವರ್ಗಾಯಿಸಿವೆ.
          1995 ರ ನಂತರ 10 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ವೆಚ್ಚದ ಮನೆಗಳಿಗೆ ಸೆಸ್ ಅನ್ವಯಿಸುತ್ತದೆ. 2010 ರಿಂದ ಸೆಸ್ ಬಾಕಿಯನ್ನು ಕಾರ್ಮಿಕ ಕಚೇರಿಯ ಮೂಲಕ ಸಂಗ್ರಹಿಸಲಾಗುತ್ತದೆ. ಪರಿಷ್ಕøತ ಮಾನದಂಡಗಳ ಪ್ರಕಾರ 100 ಚದರ ಮೀಟರ್ ವಿಸ್ತೀರ್ಣದ ಕಟ್ಟಡಗಳು 7,050 ರೂ ಸೆಸ್ ಪಾವತಿಸಬೇಕಾಗುತ್ತದೆ. ಸಾಲ ಮಾಡಿ ಮನೆ ಕಟ್ಟಿಕೊಂಡವರಿಗೆ ಸೆಸ್ ಕರಾಳವಾಗಿದೆ.
         ನಿರ್ಮಾಣ ಸಾಮಗ್ರಿಗಳ ಮೇಲಿನ ತೆರಿಗೆ, ಸ್ಥಳೀಯ ಸಂಸ್ಥೆಗಳ ಮೇಲಿನ ಕಟ್ಟಡ ತೆರಿಗೆ, ಐμÁರಾಮಿ ತೆರಿಗೆ ಮತ್ತು ಒಂದು ಬಾರಿ ತೆರಿಗೆಗೆ ಸೆಸ್ ಹೆಚ್ಚುವರಿಯಾಗಿದೆ. ಈ ಹಿಂದೆ ಕಾರ್ಮಿಕ ಅಧಿಕಾರಿಗಳು ನೀಡಿದ ತಪ್ಪು ಮಾಹಿತಿಯ ಆಧಾರದ ಮೇಲೆ ಭಾರಿ ಮೊತ್ತದ ಸೆಸ್ ಪಾವತಿಸಿದ ಮನೆ ಮಾಲೀಕರೂ ಇದ್ದಾರೆ. ವಾಣಿಜ್ಯ ಸಂಸ್ಥೆಗಳು ಕಾರ್ಯನಿರ್ವಹಿಸುವ ಕಟ್ಟಡಗಳು ಸಹ ಸೆಸ್ ಪಾವತಿಸಲು ಹೊಣೆಗಾರರಾಗಿದ್ದಾರೆ.
       ಬಾಕಿ ನೋಟಿಸ್ ಪಡೆದವರು ಜಿಲ್ಲಾ ಕಾರ್ಮಿಕ ಕಚೇರಿಗಳಿಗೆ ಭೇಟಿ ನೀಡುತ್ತಿದ್ದಾರೆ. ಬಾಕಿಯನ್ನು ಕಂತುಗಳಲ್ಲಿ ಪಾವತಿಸಬಹುದು. ಮೊದಲ ಕಟ್ಟಡ ತೆರಿಗೆ ರಶೀದಿಯನ್ನು ಹೊರತುಪಡಿಸಿ, ಕಟ್ಟಡ ಪರವಾನಗಿ, ಪೂರ್ಣಗೊಂಡ ಪ್ರಮಾಣಪತ್ರ ಮತ್ತು ಒಂದು ಬಾರಿ ಆದಾಯ ತೆರಿಗೆ ರಶೀದಿಯನ್ನು ಸಹ ಹಾಜರುಪಡಿಸಬೇಕು.
         ನೋಟಿಸ್ ಬಂದರೂ ಸ್ಪಂದಿಸದವರ ವಿರುದ್ಧ ಕಂದಾಯ ವಸೂಲಾತಿ ಆರಂಭಿಸಲಾಗಿದೆ. ಕಾರ್ಮಿಕರ ರಕ್ಷಣೆಗಾಗಿ ಸೆಸ್ ಸಂಗ್ರಹಿಸಲಾಗಿದೆಯೇ ಹೊರತು ಕಟ್ಟಡ ಮಾಲೀಕರಿಗೆ ದಂಡ ವಿಧಿಸಲು ಅಲ್ಲ ಎಂದು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ವಿವರಿಸುತ್ತದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries