HEALTH TIPS

ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಹತ್ಯೆಯಂತಹ ವಿಷಯಗಳ ಬಗ್ಗೆ ಪಕ್ಷ ಹೆಚ್ಚು ಧ್ವನಿ ಎತ್ತಬಹುದಿತ್ತು: ಶಶಿ ತರೂರ್

              ರಾಯಪುರ: ಎಲ್ಲರನ್ನೂ ಒಳಗೊಳ್ಳುವ ಭಾರತದ ಪರವಾಗಿ ಕಾಂಗ್ರೆಸ್ ತನ್ನ ಸೈದ್ಧಾಂತಿಕ ನಿಲುವಿನಲ್ಲಿ ಸಂಪೂರ್ಣವಾಗಿ ಸ್ಪಷ್ಟವಾಗಿರಬೇಕು ಹಾಗೂ ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣ ಹಾಗೂ ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಹತ್ಯೆಯಂತಹ ವಿಷಯಗಳ ಬಗ್ಗೆ ಪಕ್ಷವು ಹೆಚ್ಚು ಧ್ವನಿ ಎತ್ತಬಹುದಿತ್ತು ಎಂದು ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಶನಿವಾರ ಹೇಳಿದ್ದಾರೆ.

                    ರಾಯ್ಪುರದಲ್ಲಿ ನಡೆದ ಪಕ್ಷದ 85ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ತರೂರ್, ಕಾಂಗ್ರೆಸ್ ತನ್ನ ತಳಹದಿಯ ತತ್ವಗಳಿಗಾಗಿ ನಿಲ್ಲಬೇಕು ಎಂದರು.

                     "ನಮ್ಮ ನಂಬಿಕೆಗಳ ಮೇಲೆ ಧೈರ್ಯ ಹೊಂದಿರಬೇಕು. ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣ, ಕ್ರಿಶ್ಚಿಯನ್ ಚರ್ಚ್‌ಗಳ ಮೇಲಿನ ದಾಳಿಗಳು, ಗೋರಕ್ಷಣೆಯ ಹೆಸರಿನಲ್ಲಿ ಹತ್ಯೆಗಳು, ಮುಸ್ಲಿಮರ ಮನೆಗಳನ್ನು ಬುಲ್ಡೋಝರ್ ಮೂಲಕ ಧ್ವಂಸ ಹಾಗೂ ಅಂತಹುದೇ ವಿಷಯಗಳ ಬಗ್ಗೆ ನಾವು ಹೆಚ್ಚು ಧ್ವನಿ ಎತ್ತಬಹುದಿತ್ತು" ಎಂದು ತರೂರ್ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries