HEALTH TIPS

ಪ್ಲಾಸ್ಟಿಕ್​ ಬಿಟ್ಟು ಬಟ್ಟೆ ಚೀಲ ಬಳಸಿ ಎಂದು ಮನ್​ ಕಿ ಬಾತ್​ನಲ್ಲಿ ವಿನಂತಿಸಿದ ಪ್ರಧಾನಿ

 

                ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು (ಭಾನುವಾರ) ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್'ನಲ್ಲಿ ನಾಗರಿಕರಿಗೆ 'ಪ್ಲಾಸ್ಟಿಕ್‌ ಚೀಲಗಳನ್ನು ಬಟ್ಟು ಬಟ್ಟೆ ಚೀಲಗಳನ್ನು ಬಳಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಿ' ಎಂದು ಕೇಳಿಕೊಂಡಿದ್ದು ಇದು ಸ್ವಚ್ಛ ಭಾರತ ಯೋಜನೆಯ ಭಾಗ ಎಂದಿದ್ದಾರೆ.

                ತಮ್ಮ 98ನೇ 'ಮನ್ ಕಿ ಬಾತ್' ಭಾಷಣದಲ್ಲಿ, ಪ್ರಧಾನಿ ಮೋದಿ ಅವರು ಸ್ವಚ್ಛ ಭಾರತ ಅಭಿಯಾನವು ದೇಶದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯ ( ಜನ್ ಭಾಗಿದಾರಿ) ಅರ್ಥವನ್ನು ಬದಲಾಯಿಸಿದೆ ಎಂದು ಹೇಳಿದರು. ಈ ಬಾರಿ 'ಮನ್ ಕಿ ಬಾತ್'ನಲ್ಲಿ ಹರಿಯಾಣದ ಯುವಕರ ಸ್ವಚ್ಛತಾ ಅಭಿಯಾನವನ್ನು ಪ್ರಧಾನಿ ಉಲ್ಲೇಖಿಸಿದರು.

                   ಹರಿಯಾಣದಲ್ಲಿ ದುಲ್ಲೇದಿ ಎಂಬ ಗ್ರಾಮವಿದೆ. ಇಲ್ಲಿನ ಯುವಕರು ಭಿವಾನಿ ನಗರವನ್ನು ಸ್ವಚ್ಛತೆಯಲ್ಲಿ ಮಾದರಿಯಾಗಿ ಮಾಡಬೇಕು ಎಂದು ನಿರ್ಧರಿಸಿ ಯುವ ಸ್ವಚ್ಛತಾ ಏವಂ ಜನಸೇವಾ ಸಮಿತಿ ಎಂಬ ಸಂಘಟನೆಯನ್ನು ರಚಿಸಿದರು. ಈ ಸಮಿತಿಗೆ ಸಂಬಂಧಿಸಿದ ಯುವಕರು ಭಿವಾನಿಗೆ ಬೆಳಿಗ್ಗೆ 4 ಗಂಟೆಗೆ ಹೋಗುತ್ತಾರೆ. ಅಲ್ಲಿ ಎಲ್ಲರೂ ಒಟ್ಟಾಗಿ ನಗರದ ವಿವಿಧ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನಗಳನ್ನು ನಡೆಸುತ್ತಾರೆ. ಈ ಜನರು ಇದುವರೆಗೆ ನಗರದ ವಿವಿಧ ಪ್ರದೇಶಗಳಿಂದ ಟನ್‌ಗಟ್ಟಲೆ ಕಸವನ್ನು ತೆರವುಗೊಳಿಸಿದ್ದಾರೆ.

                      ಇದೇ ಸಂದರ್ಭ ಸ್ವಸಹಾಯ ಸಂಘವನ್ನು ನಡೆಸುತ್ತಿರುವ ಒಡಿಶಾದ ಕೇಂದ್ರಪದ ಜಿಲ್ಲೆಯ ನಿವಾಸಿ ಕಮಲಾ ಮೊಹರಾನಾ ಅವರನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದರು. 'ತ್ಯಾಜ್ಯದಿಂದ ಸಂಪತ್ತು' ಎಂಬುದು ಸ್ವಚ್ಛ ಭಾರತ ಅಭಿಯಾನದ ಪ್ರಮುಖ ಆಯಾಮವಾಗಿದೆ . ಇದು ಸ್ವಚ್ಛತೆಯನ್ನು ಖಾತ್ರಿಪಡಿಸುವುದರ ಜೊತೆಗೆ ಅವರಿಗೆ ಉತ್ತಮ ಆದಾಯದ ಮೂಲವಾಗುತ್ತಿದೆ. ನಾವು ನಿರ್ಧಾನ ತೆಗೆದುಕೊಂಡರೆ, ಸ್ವಚ್ಛ ಭಾರತಕ್ಕೆ ದೊಡ್ಡ ಕೊಡುಗೆಯನ್ನು ನೀಡಬಹುದು. ಕನಿಷ್ಠ, ನಾವೆಲ್ಲರೂ ಪ್ಲಾಸ್ಟಿಕ್ ಚೀಲಗಳನ್ನು ಬಿಟ್ಟು ಬಟ್ಟೆಯ ಚೀಲಗಳನ್ನು ಬಳಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು, 'ಎಂದು ಪ್ರಧಾನಿ ಮೋದಿ ಹೇಳಿದರು .


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries