ಕೊಟ್ಟಾಯಂ: ಮುಖ್ಯಮಂತ್ರಿಯವರ ಪೊಲೀಸ್ ಬೆಂಗಾವಲು ವಾಹನದ ವೇಗದ ಬಗ್ಗೆ ಪಾಲಾ ಪ್ರಥಮ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ವರದಿ ಕೇಳಿದೆ.
ನ್ಯಾಯಾಲಯವು ಕುಮಿಲಂಗಾಡ್ ಎಸ್‍ಎಚ್‍ಒ ನಿರ್ಮಲ್ ಮುಹ್ಸಿನ್ ಅವರಿಂದ ವರದಿ ಕೇಳಿದೆ. ಜನಸಾಮಾನ್ಯರು ರಸ್ತೆಯಲ್ಲಿ ಓಡಾಡಬೇಡವೇ ಎಂದು ಕೋರ್ಟ್ ಕೇಳಿದೆ. ನಿನ್ನೆ ಸಿಎಂ ಅವರ ಬೆಂಗಾವಲ ವಾಹನ ಅತಿ ವೇಗದಲ್ಲಿ ಸಾಗಿತ್ತು.
ಮುಖ್ಯಮಂತ್ರಿಗಳ ವಾಹನ ಸಾಗಿದಾಗ ಮ್ಯಾಜಿಸ್ಟ್ರೇಟ್ ವಾಹನವೂ ಪಕ್ಕದಲ್ಲೇ ಇತ್ತು. ಈ ರೀತಿ ಅಪಾಯಕಾರಿಯಾಗಿ ವಾಹನಗಳು ಸಂಚರಿಸುತ್ತಿರುವುದಕ್ಕೆ ಮ್ಯಾಜಿಸ್ಟ್ರೇಟ್ ಅಸಮಾಧಾನ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ನ್ಯಾಯಾಲಯ ಕೇಳಿದೆ. 17ರೊಳಗೆ ಈ ಬಗ್ಗೆ ವರದಿ ಸಲ್ಲಿಸುವಂತೆಯೂ ನ್ಯಾಯಾಲಯ ಹೇಳಿದೆ.
ಮುಖ್ಯಮಂತ್ರಿಗಳ ಬೆಂಗಾವಲು ವಾಹನದ ಅತಿಯಾದ ವೇಗ: ಎಸ್.ಎಚ್.ಒ ರಲ್ಲಿ ವರದಿ ಕೇಳಿದ ನ್ಯಾಯಾಲಯ
0
ಫೆಬ್ರವರಿ 14, 2023
Tags





