HEALTH TIPS

ಎಡರಂಗದ ಜನದ್ರೋಹಿ ಬಜೆಟ್ ವಿರುದ್ಧ ಯೂತ್‍ಲೀಗಿನಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ, ಸ್ಪೋಟಗೊಂಡ ಆಕ್ರೋಶ




            ಕಾಸರಗೋಡು: ಎಡರಂಗ ಸರ್ಕಾರ ಮಂಡಿಸಿರುವ ಬಜೆಟ್ ವಿರುದ್ಧ ಮುಸ್ಲಿಂ ಯೂತ್ ಲೀಗ್ ಬುಧವಾರ ಹಮ್ಮಿಕೊಂಡಿದ್ದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆಯಲ್ಲಿ ಯುವಜನತೆಯ ಆಕ್ರೋಶ ಎದ್ದುಕಾಣಿಸಿತು. ಜಲಫಿರಂಗಿಗೂ ಜಗ್ಗದೆ ಪ್ರತಿಭಟನಾಕಾರರು ಪೊಲೀಸ್ ಬಾರಿಕೇಡ್ ಏರಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಮುನ್ನುಗ್ಗಲು ಯತ್ನಿಸಿದರು. ರಾಜ್ಯ ಸಮಿತಿ ಮುಖಂಡ ವಕೀಲ ಪಿ.ಕೆ ಫಿರೋಸ್ ಪ್ರತಿಭಟನಾ ಧರಣಿ ಉದ್ಘಾಟಿಸಿ ಮಾತನಾಡಿ, ಕೇರಳವನ್ನು ಆಳುತ್ತಿರುವ ಎಡರಂಗ ಸರ್ಕಾರ ಬಡಜನ ವಿರೋಧಿಯಾಘಿದ್ದು,  ಖಜಾನೆ ಕೊಳ್ಳೆಗಾರರಿಂದ ತುಂಬಿಕೊಂಡಿದೆ. ಸ್ವಂತಕ್ಕಾಗಿ ಭಾರಿ ಖರ್ಚು ನಡೆಸುತ್ತಿರುವ ಸಂಪುಟ ಸಚಿವರು ಈ  ಖರ್ಚುವೆಚ್ಚಗಳನ್ನು ಜನಸಾಮಾನ್ಯರ ಮೇಲೆ ಹೇರುತ್ತಿದ್ದಾರೆ. ಬಾಕಿ ಬರಬೇಕಾದ 22,000 ಕೋಟಿಗೂ ಹೆಚ್ಚು ತೆರಿಗೆ ವಸೂಲಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಸೂಕ್ತ ರೀತಿಯಲ್ಲಿ ತೆರಿಗೆ ವಸೂಲಿ ನಡೆಸದೆ, ಬಡಜನರ ಮೇಲೆ ಸೆಸ್ ವಿಧಿಸಲು ಮುಂದಾಗಿರುವುದು ಖಂಡನೀಯ. ಪ್ರತಿ ವಿಷಯದಲ್ಲೂ ಪ್ರತಿಭಟನೆ ನಾಟಕವಾಡುತ್ತಿರುವ ರಾಜ್ಯದ ಡಿವೈಎಫ್‍ಐ ಸಂಘಟನೆ ಕ್ವಾರಂಟೈನ್‍ಗೆ ತೆರಳಿದ್ದರೆ, ಸಿಪಿಐನ ಯುವಜನ ಸಂಘಟನೆ ಎಐವೈಎಫ್ ಮೌನಕ್ಕೆ ಶರಣಾಗಿದೆ ಎಂದು ಲೇವಡಿಮಾಡಿದರು.



               ಮುಸ್ಲಿಂ ಯೂತ್ ಜೀಲಗ್ ಜಿಲ್ಲಾಧ್ಯಕ್ಷ  ಅಜೀಜ್ ಕಳತ್ತೂರು ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಮಾತನಾಡಿ, ಈ ಬಾರಿ ಎಡರಂಗ ಸರ್ಕಾರ ಮಂಡಿಸಿದ ಬಜೆಟ್ ಅತ್ಯಂತ ಕೆಟ್ಟದಾಗಿದ್ದು, ಕಾಸರಗೋಡು ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿದೆ. ಜಿಲ್ಲೆಯ ವೈದ್ಯಕೀಯ, ಶೈಕ್ಷಣಿಕ,, ಮೂಲಸೌಕರ್ಯದ ಬಗ್ಗೆ ಕಿಂಚಿತ್ತೂ ನಿಗಾವಹಿಸಿಲ್ಲ. ಕಾಸರಗೋಡು ವೈದ್ಯಕೀಯ ಕಾಲೇಜು, ಟಾಟಾ ಆಸ್ಪತ್ರೆ ಅಭಿವೃದ್ಧಿಗೂ ಗಮನಹರಿಸಿಲ್ಲ. ಈ ಎಲ್ಲದರ ಮಧ್ಯೆ ಜನಸಾಮಾನ್ಯರಿಂದ ಹೆಚ್ಚಿನ ಸೆಸ್ ಮೂಲಕ ಮಕ್ಕಾಡೆಮಲಗಿಸಲು ಯತ್ನಿಸಿರುವುದಾಗಿ ಆರೋಪಿಸಿದರು.   ಮುಸ್ಲಿಂಲೀಗ್ ರಾಜ್ಯ ಉಪಾಧ್ಯಕ್ಷ ಅಶ್ರಫ್ ಎಡನೀರ್, ಅಶ್ರಫ್ ಕೊಡ್ಯಮ್ಮೆ. ಟಿ.ಡಿ ಕಬೀರ್, ಜಹೀರ್ ಆಸಿಫ್, ಎಂ.ಬಿ.ಶಾನವಾಜ್,  ಎಂ.ಸಿ.ಶಿಹಾಬ್ ಮಾಸ್ಟರ್, ಎಂ.ಎ.ನಜೀಬ್ ಮುಂತಾದವರು ಉಪಸ್ಥಿತರಿದ್ದರು. ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ವರುಣ ಜಲಫಿರಂಗಿ ವಾಹನದಿಂದ ನೀರು ಸಿಂಪಡಿಸುವ ಮೂಲಕ ಬಾರಿಕೇಡ್ ಏರಿ ಮುನ್ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ತಡೆಯಲಾಯಿತು.




 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries