ಶ್ರೀಹರಿಕೋಟಾ(PTI): ಬ್ರಿಟನ್ ಮೂಲದ ಒನ್‌ವೆಬ್ ಗ್ರೂಪ್‌ಗೆ ಸೇರಿದ 36 ಉಪಗ್ರಹಗಳನ್ನು ಹೊತ್ತ ಇಸ್ರೊದ ಅತ್ಯಂತ ಭಾರವಾದ ಲಾಂಚ್ ವೆಹಿಕಲ್ ಮಾರ್ಕ್-3 (ಎಲ್‌ವಿಎಂ3) ಉಡಾವಣಾ ನೌಕೆ ಭಾನುವಾರ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಹಾರಿತು.
ಇಸ್ರೊದ ವಾಣಿಜ್ಯ ಘಟಕ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ಬ್ರಿಟನ್‌ನ ನೆಟ್‌ವರ್ಕ್ ಆಕ್ಸೆಸ್ ಅಸೋಸಿಯೇಟ್ಸ್ ಲಿಮಿಟೆಡ್ (ಒನ್‌ವೆಬ್ ಗ್ರೂಪ್ ಕಂಪನಿ) ಸಂಸ್ಥೆಯೊಂದಿಗಿನ ಒಪ್ಪಂದದಂತೆ ನಡೆಸಿದ ಎರಡನೇ ಉಡಾವಣಾ ಕಾರ್ಯಾಚರಣೆ ಇದಾಗಿದೆ.
ಇದೇ ಯೋಜನೆ ಅಡಿಯಲ್ಲಿ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ 36 ಉಪಗ್ರಹಗಳನ್ನು ಉಡ್ಡಯನ ಮಾಡಲಾಗಿತ್ತು. ಈ ಮೂಲಕ ಭೂಮಿಗೆ ಸಮೀಪದ ಕಕ್ಷೆಗೆ (ಎಲ್‌ಇಒ) ಒಟ್ಟು 72 ಸಂವಹನ ಉಪಗ್ರಹಗಳನ್ನು ಸೇರಿಸಲಾಗಿದೆ.
LVM3-M3
/OneWeb
India-2 mission:
The countdown has commenced.
The launch can be watched LIVE
from 8:30 am IST on March 26, 2023
isro.gov.in
facebook.com/ISRO
youtube.com/live/bIKIzl-h3
1.5K
Reply
Copy link






