HEALTH TIPS

ಬ್ರಹ್ಮಪುರಂ ಸಂಪೂರ್ಣ ಅವೈಜ್ಞಾನಿಕ ಮತ್ತು ಅಕ್ರಮ; ಮೀಥೇನ್ ಅನಿಲದಿಂದ ಬೆಂಕಿಯ ಮತ್ತಷ್ಟು ಅಪಾಯ: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ


            ಎರ್ನಾಕುಳಂ: ಬ್ರಹ್ಮಪುರಂನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳು ಸಂಪೂರ್ಣ ಅವೈಜ್ಞಾನಿಕ ಮತ್ತು ಅಕ್ರಮ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.
           ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಧ್ಯಂತರ ವರದಿ ಪ್ರಕಾರ ಕೊಚ್ಚಿ ಮುನ್ಸಿಪಲ್ ಕಾಪೆರ್Çರೇಷನ್ ಸರಿಯಾದ ಮುನ್ನೆಚ್ಚರಿಕೆ ಅಥವಾ ಯೋಜನೆ ಇಲ್ಲದೆ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಮಾಡಿದೆ.
             ಕೊಚ್ಚಿ ನಗರಸಭೆ ಹಾಗೂ ಗುತ್ತಿಗೆ ವಹಿಸಿಕೊಂಡ ಕಂಪನಿಯ ಗಂಭೀರ ಲೋಪ ಪಟ್ಟಿ ಮಾಡಿರುವ ವರದಿ ಹೊರಬಿದ್ದಿದೆ. ವರದಿಯ ಪ್ರಕಾರ, ಅಧಿಕಾರಿಗಳು ಪರಿಶೀಲನೆಗಾಗಿ ಬ್ರಹ್ಮಪುರಂ ತಲುಪಿದಾಗ, ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದೆ. ಬ್ರಹ್ಮಪುರಂನಲ್ಲಿ ಯಾವುದೇ ಘನತ್ಯಾಜ್ಯ ನಿರ್ವಹಣೆ ನಿಯಮಾವಳಿ 2016 ಅನುಸರಿಸುತ್ತಿಲ್ಲ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿಯಿಲ್ಲದೆ ಬ್ರಹ್ಮಪುರಂ ಕಾರ್ಯನಿರ್ವಹಿಸುತ್ತಿತ್ತು.
         ಪ್ರತ್ಯೇಕಿಸಬೇಕಾದ ಕಸವೂ ಅಲ್ಲಿಯೇ ರಾಶಿ ಬಿದ್ದಿದೆ. ಸರಿಯಾಗಿ ವಿಂಗಡಣೆಯಾಗದಂತಹ ಸಾವಯವ ತ್ಯಾಜ್ಯಗಳ ಶೇಖರಣೆಯಿಂದ ಮೀಥೇನ್ ಅನಿಲ ಉತ್ಪಾದನೆಯ ಸಾಧ್ಯತೆಯನ್ನು ನಿರ್ಲಕ್ಷಿಸಲಾಗುವುದಿಲ್ಲ. ಹಾಗಾಗಿ ಮತ್ತಷ್ಟು ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇನ್ನೂ ಸಮೀಪದ ಎಲೆಕ್ಟ್ರಿಕ್ ಪೆÇೀಸ್ಟ್ ಗಳಿಂದ ಕಿಡಿಗಳು ಏರಿ ಬೆಂಕಿ ತಗುಲಿರುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
           ಬ್ರಹ್ಮಪುರಂನಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಯಾವುದೇ ಯೋಜನೆ ಅಥವಾ ವಿನ್ಯಾಸವಿಲ್ಲದೆ ಸ್ಥಾಪಿಸಲಾಗಿದೆ. ಇಲ್ಲಿ ಡಾಂಬರು ಹಾಕಿದ, ಕಲ್ಲು ಹಾಕಿದ ರಸ್ತೆಯಾಗಲೀ, ಚರಂಡಿಯಾಗಲೀ ಇಲ್ಲ. ಪ್ರಮುಖ ಕಟ್ಟಡ ಬೀಳುವ ಸ್ಥಿತಿಯಲ್ಲಿದೆ. ಗುತ್ತಿಗೆ ಪಡೆದಿರುವ ಕಂಪನಿ, ಜೊಂಟಾ ಇನ್ಫ್ರಾಟೆಕ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು, ಯಾವುದೇ ತ್ಯಾಜ್ಯ ತೆಗೆಯುವಿಕೆ ಅಥವಾ ಸಂಸ್ಕರಣಾ ಚಟುವಟಿಕೆಗಳನ್ನು ನಡೆಸಿಲ್ಲ.
           ಅಗ್ನಿ ದುರಂತದ ನಂತರ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಬೆಂಗಳೂರು ಪ್ರಾದೇಶಿಕ ನಿರ್ದೇಶನಾಲಯ ಬ್ರಹ್ಮಪುರಕ್ಕೆ ಭೇಟಿ ನೀಡಿತು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries