HEALTH TIPS

ಜಿಲ್ಲೆಯ ನದಿಗಳಿಂದ ತೆರವುಗೊಳಿಸಿದ ಮರಳುಮಿಶ್ರಿತ ಮಣ್ಣು ಹರಾಜು

 
 

                ಕಾಸರಗೋಡು: ಜಲ ಸಂಪನ್ಮೂಲ ಇಲಾಖೆಯ  ಮೇಲ್ವಿಚಾರಣೆಯಲ್ಲಿ ವಿಪತ್ತು ನಿರ್ವಹಣೆ ಚಟುವಟಿಕೆ ಅಂಗವಾಗಿ ಮಳೆಗಾಲ ಪೂರ್ವ ಸಿದ್ಧತೆಗೆ ಸಂಬಂಧಿಸಿ ಚೆಂಗಳ, ಪೈವಳಿಕೆ, ಮೀಂಜಾ, ಮಂಗಲ್ಪಾಡಿ, ಮಧೂರು, ಪುಲ್ಲೂರ್ ಪೆರಿಯ, ಅಜನೂರ್, ಮಂಜೇಶ್ವರ, ಕುಂಬಳೆ, ಪುತ್ತಿಗೆ, ವೆಸ್ಟ್‍ಎಳೇರಿ,ಬಳಾಲ್ ಪಂಚಾಯಿತಿ ವ್ಯಾಪ್ತಿಯ ಹಾಗೂ ಕಣ್ಣೂರು ಜಿಲ್ಲೆಯ ಪೆರಿಂಗೊಂ-ವಯಕ್ಕರ, ಚೆರುಪುಳ ಪಂಚಾಯತ್ ಗಳಲ್ಲಿ ಸೇರಿ ಒಟ್ಟು 29 ಸ್ಥಳಗಳಲ್ಲಿ ಸಂಗ್ರಹಿಸಿದ ಮರಳುಮಿಶ್ರಿತ ಮಣ್ಣು ಕ್ವೋಟೇಶನ್, ಜಾಹೀರಾತು ಹರಾಜು ಮೂಲಕ ಮಾರಾಟ ಮಾಡಲಿರುವ ಪ್ರಕ್ರಿಯೆ ಕಾಸರಗೋಡು ಇರಿಗೇಷನ್ ಡಿವಿಷನ್ ಪ್ರಾರಂಭಿಸಿದೆ.
            ಏಪ್ರಿಲ್ 3 ರಿಂದ 5 ತನಕ ನಡೆಸುವ ಕ್ವೋಟೇಶನ್, ಜಾಹೀರಾತು ಹರಾಜುಗಳಲ್ಲಿ ಸಾರ್ವಜನಿಕರಿಗೆ ಭಾಗವಹಿಸಬಹುದಾಗಿದೆ. ಕ್ವೋಟೇಶನ್, ಜಾಹೀರಾತು ಹರಾಜು ಸಂಬಂಧಿಸಿದ ವಿವರಗಳಿಗೆ ಕಾಸರಗೋಡು ಇರಿಗೇಷನ್ ಡಿವಿಷನ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಕಾರ್ಯಾಲಯ ಸಂಪರ್ಕಿಸಬಹುದಾಗಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿಸಂಖ್ಯೆ(04994 256180) ಯಾ ಇ-ಮೇಲ್(exe.eಟಿg.iಡಿಡಿgಟಿ.ಞsಜ@gmಚಿiಟ.ಛಿom.)ಮೂಲಕ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries