HEALTH TIPS

ಮೋದಿ ಜೊತೆ ಗೋಲ್‌ಗಪ್ಪಾ ಸವಿದ ಜಪಾನ್‌ ಪ್ರಧಾನಿ ಫೆಮಿಯೊ ಕಿಶಿದಾ

 

             ನವದೆಹಲಿ: ಭಾರತ ಭೇಟಿಯಲ್ಲಿರುವ ಜಪಾನ್‌ ಪ್ರಧಾನಿ ಫೆಮಿಯೊ ಕಿಶಿದಾ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆಯಲ್ಲಿ ಗೋಲ್‌ಗಪ್ಪಾ ಸೇರಿದಂತೆ ಹಲವು ಭಾರತೀಯ ತಿನಿಸುಗಳನ್ನು ಸವಿದರು.

                      ಇಲ್ಲಿನ ಬುದ್ಧ ಜಯಂತಿ ಉದ್ಯಾನದಲ್ಲಿ ಸೋಮವಾರ ಸಂಜೆ ಗೋಲ್‌ಗಪ್ಪಾ ಸೇರಿದಂತೆ ಹಲವು ಭಾರತೀಯ ತಿನಿಸುಗಳನ್ನು ಸವಿದರು.

                 ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ನನ್ನ ಜಪಾನ್‌ ಸ್ನೇಹಿತ ಕಿಶಿದಾ ಅವರು ಭಾರತೀಯ ತಿನಿಸುಗಳನ್ನು ಸವಿದರು ಎಂದು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ನೊಂದಿಗೆ ನಾಲ್ಕು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.


                 ಕಿಶಿದಾ ಅವರು 27 ಗಂಟೆಗಳ ಭಾರತ ಭೇಟಿಗಾಗಿ ಸೋಮವಾರ ಬೆಳಿಗ್ಗೆ ನವದೆಹಲಿಗೆ ಬಂದಿಳಿದರು. ನಂತರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್‌ ಪ್ರಧಾನಿ ಕಿಶಿದಾ ಅವರು ವಿವಿಧ ಕ್ಷೇತ್ರಗಳಲ್ಲಿ ಎರಡೂ ದೇಶಗಳ ಸಹಕಾರಗಳ ಕುರಿತು ಇಲ್ಲಿನ ಹೈದರಾಬಾದ್‌ ಹೌಸ್‌ನಲ್ಲಿ ಮಾತುಕತೆ ನಡೆಸಿದರು. ಬಳಿಕ ಪ್ರಧಾನಿ ಕಿಶಿದಾ ಅವರು ಮಾತನಾಡಿದರು.

                   ಹಿಂದೂ ಮಹಾಸಾಗರ-ಪೆಸಿಫಿಕ್‌ ಪ್ರದೇಶದಲ್ಲಿರುವ ದೇಶಗಳ ಆರ್ಥಿಕತೆಗೆ (ಕಾರ್ಖಾನೆ ಸ್ಥಾಪನೆಯಿಂದ ವಿಪತ್ತು ತಡೆವರೆಗೆ) ಸಹಾಯ ಮಾಡುವ ಉದ್ದೇಶದಿಂದ 75 ಬಿಲಿಯನ್‌ ಡಾಲರ್‌ನಷ್ಟು (ಅಂದಾಜು 6.15 ಲಕ್ಷ ಕೋಟಿ) ಹೂಡಿಕೆ ಮಾಡಲಾಗುವುದು. ನಮ್ಮ ಗುರಿಯನ್ನು ತಲುಪುವಲ್ಲಿ ಭಾರತವು ಮುಖ್ಯವಾದ ಪಾತ್ರವಹಿಸಲಿದೆ' ಎಂದು ಕಿಶಿದಾ ಹೇಳಿದ್ದಾರೆ.

My friend PM @kishida230 enjoyed Indian snacks including Golgappas.
Image
Image
Image
Image
69.6K
Reply
Copy link

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries