HEALTH TIPS

ಕೇರಳ ವಿ.ವಿ.: ಆರು ತಿಂಗಳ ಮಾತೃತ್ವ ರಜೆಗೆ ಅವಕಾಶ

 

              ತಿರುವನಂತಪುರ : ಕೊಟ್ಟಾಯಂನ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದಂತೆಯೇ ಇಲ್ಲಿನ ಕೇರಳ ವಿಶ್ವವಿದ್ಯಾಲಯವೂ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ ಆರು ತಿಂಗಳ ಮಾತೃತ್ವ ರಜೆ ನೀಡಲು ನಿರ್ಧರಿಸಿದೆ.

                     'ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಎಲ್ಲಾ ಶಿಕ್ಷಣ ಸಂಸ್ಥೆಗಳೂ ತಮ್ಮ ವಿದ್ಯಾರ್ಥಿನಿಯರಿಗೆ ಮುಟ್ಟಿನ ಹಾಗೂ ಮಾತೃತ್ವ ರಜೆ ನೀಡಬಹುದು' ಎಂದು ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಅವರು ಇತ್ತೀಚೆಗೆ ಘೋಷಣೆ ಮಾಡಿದ್ದರು.

ಇದರಂತೆ ಕೇರಳ ವಿ.ವಿಯು ಈ ನಿರ್ಧಾರ ಕೈಗೊಂಡಿದೆ.

                 'ವಿದ್ಯಾರ್ಥಿನಿಯು ಆರು ತಿಂಗಳು ಮಾತೃತ್ವ ರಜೆ ತೆಗೆದುಕೊಂಡರೆ, ಕಾಲೇಜಿಗೆ ಮರುದಾಖಲಾಗುವ ಅಗತ್ಯವಿಲ್ಲ. ಆದರೆ, ವಿದ್ಯಾರ್ಥಿನಿಯು ಕಾಲೇಜಿಗೆ ಮರುಸೇರ್ಪಡೆಗೊಳ್ಳುವಾಗ ಪ್ರಾಂಶುಪಾಲರು ಆಕೆಯ ವೈದ್ಯಕೀಯ ವರದಿಗಳನ್ನು ಪರಿಶೀಲಿಸಬೇಕು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಅನುಮತಿ ಪಡೆದುಕೊಳ್ಳುವ ಅಗತ್ಯವಿಲ್ಲ' ಎಂದು ವಿಶ್ವವಿದ್ಯಾಲಯವು ತನ್ನ ಮಾರ್ಚ್‌2ರ ಆದೇಶದಲ್ಲಿ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries