HEALTH TIPS

ಟೆಕ್​ ದೈತ್ಯ ಗೂಗಲ್​ಗೆ ಬಿತ್ತು ಭಾರಿ ಮೊತ್ತದ ದಂಡ; CCI ಆದೇಶ ಎತ್ತಿ ಹಿಡಿದ NCLAT

 

                ನವದೆಹಲಿ: ಟೆಕ್​ ದೈತ್ಯ ಗೂಗಲ್​ಗೆ ಕಾಂಪಿಟೇಷನ್​ ಕಮಿಷನ್​ ಆಫ್​ ಇಂಡಿಯಾ(CCI) ವಿಧಿಸಿದ್ದ 1,337.76 ಕೋಟಿ ರೂಪಾಯಿ ದಂಡವನ್ನು ನ್ಯಾಷನಲ್​ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ(NCLAT) ಎತ್ತಿ ಹಿಡಿದಿದೆ.

                    ಅರ್ಜಿ ವಿಚಾರಣೆ ನಡೆಸಿದ ಜಸ್ಟಿಸ್​ ಅಶೋಕ್​ ಭೂಷಣ್​, ಅಲೋಕ್​ ಶ್ರೀವಾಸ್ತವ್​ ಅವರಿದ್ದ ದ್ವಿಸದಸ್ಯ ಪೀಠವು ನೂತನ ನಿರ್ದೇಶನಗಳನ್ನು ಜಾರಿ ಮಾಡುವಂತೆ ಮತ್ತು 30 ದಿನದ ಒಳಗಾಗಿ ದಂಡವನ್ನು ಪಾವತಿಸುವಂತೆ ಗೂಗಲ್​​ಗೆ ಸೂಚಿಸಿದ್ದಾರೆ.

                ತನಿಖೆ ವೇಳೆ CCIನಿಂದ ಲೋಪದೋಷವಾಗಿದೆ ಎಂದು ಆರೋಪಿಸಿ ಗೂಗಲ್​ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು. ಇದೇ ವೇಳೆ ನ್ಯಾಯಪೀಠವು CCIನ ಕೆಲವು ನಿಯಮಗಳಲ್ಲಿ ಮಾರ್ಪಾಡುಗಳನ್ನು ಮಾಡಿದೆ.

                  ಆಯಂಡ್ರಾಯ್ಡ್​​ ಮೊಬೈಲ್​ ವ್ಯವಸ್ಥೆ ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಅಕ್ಟೋಬರ್​ 20, 2022ರಂದು ಗೂಗಲ್​ಗೆ CCI 1,337.76 ಕೋಟಿ ರೂಪಾಯಿ ದಂಡವನ್ನ ಹಾಕಿತ್ತು. ಇದನ್ನು ಪ್ರಶ್ನಿಸಿ NCLATಗೆ ಮೇಲ್ಮನವಿ ಸಲ್ಲಿಸಲಾಗಿತ್ತು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries