ನವದೆಹಲಿ: ಮಕ್ಕಳು ವಿದ್ಯಾಭ್ಯಾಸದ ಕುರಿತಾಗಿ ಪಾಲಕರು ಹೆಚ್ಚು ಕಾಳಜಿ ವಹಿಸುತ್ತಾರೆ. ಅಂಕ ಕಡಿಮೆ ಬಂದರೆ ಮಕ್ಕಳಿಗಿಂತ ತಂದೆ-ತಾಯಿ ಹೆಚ್ಚಾಗಿ ಆತಂಕಕ್ಕೊಳಗಾಗುತ್ತಾರೆ. ಆದರೆ ಇಲ್ಲೊಂದು ಜೋಡಿ ಮಗುವಿನ ಅಂಕಪಟ್ಟಿಯಲ್ಲಿ ಶಿಕ್ಷಕ ಬರೆದಿರುವ ಸಾಲುಗಳನ್ನು ನೋಡಿ ಶಾಕ್ ಆಗಿದ್ದಾರೆ.
ವಿದ್ಯಾರ್ಥಿನಿ ರಿಪೋರ್ಟ್ ಕಾರ್ಡ್‌ನಲ್ಲಿ ಇವಳು ಉತ್ತೀರ್ಣಳಾಗಿದ್ದಾಳೆ ಎಂದು ಇಂಗ್ಲೀಷ್ನಲ್ಲಿ ಬರೆಯುವ ವೇಳೆ 'ಅವಳು ನಿಧನರಾಗಿದ್ದಾರೆ' ಎಂದು ತಪ್ಪಾಗಿ ಬರೆದಿದ್ದಾರೆ. ಶಿಕ್ಷಕರೇ ಪದಗಳನ್ನು ತಪ್ಪಾಗಿ ಬರೆದು ಭಾರೀ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ. ಈ ರಿಪೋರ್ಟ್ ಕಾರ್ಡ್ನ ಫೋಟೋಗಳು ಸೋಶಿಯಲ್ ಮೀಡಿಯಾ ತುಂಬಾ ಹರಿದಾಡುತ್ತಿವೆ.
ರಿಪೋರ್ಟ್ ಕಾರ್ಡ್‌ನಲ್ಲಿ ಉಲ್ಲೇಖಿಸಲಾದ ವಿಷಯಗಳಲ್ಲಿ ಒಂದಾದ ಚಿಚೆವಾ ಆಗ್ನೇಯ ಆಫ್ರಿಕನ್ ದೇಶವಾದ ಮಲಾವಿಯ ಅಧಿಕೃತ ಭಾಷೆಯಾಗಿದೆ, ಇದನ್ನು ಹಿಂದೆ ನ್ಯಾಸಲ್ಯಾಂಡ್ ಎಂದು ಕರೆಯಲಾಗುತ್ತಿತ್ತು. ನಾಮಧೇಯ ವಿದ್ಯಾರ್ಥಿ ಹೆಚ್ಚಿನ ವಿಷಯಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದಾನೆ ಮತ್ತು ತರಗತಿಯಲ್ಲಿ ಏಳನೇ ಸ್ಥಾನವನ್ನು ಪಡೆದಿದ್ದಾನೆ. ಶಿಕ್ಷಕರು ಯಾಕೆ ಹೀಗೆ ಬರೆದಿದ್ದಾರೆ? ಎಂದು ಶಿಕ್ಷಕರ ಈ ಎಡವಟ್ಟಿನ ಕುರಿತಾಗಿ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.






