HEALTH TIPS

ವಿಧಿ 370 ರದ್ದತಿ ಕುರಿತ ವಾಟ್ಸ್ಯಾಪ್‌ ಸ್ಟೇಟಸ್‌: ಪ್ರೊಫೆಸರ್‌ ವಿರುದ್ಧದ FIR ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ

 

             ಮುಂಬೈ: ಸಂವಿಧಾನದ 370ನೇ ವಿಧಿ ಕುರಿತಂತೆ ವಾಟ್ಸ್ಯಾಪ್‌ ಸ್ಟೇಟಸ್‌ ಹಾಕಿದ್ದ ಪ್ರೊಫೆಸರ್‌ ಒಬ್ಬರ ವಿರುದ್ಧದ ಎಫ್‌ಐಆರ್‌ ಅನ್ನು ರದ್ದುಪಡಿಸಲು ನಿರಾಕರಿಸಿರುವ ಬಾಂಬೆ ಹೈಕೋರ್ಟ್‌, ಜನರ ಭಾವನೆಗಳಿಗೆ ನೋವುಂಟು ಮಾಡಬಹುದಾದ ಸೂಕ್ಷ್ಮ ವಿಚಾರಗಳಲ್ಲಿ ಯಾವುದೇ ಟೀಕಾತ್ಮಕ ಅಥವಾ ಅಸಮ್ಮತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೊದಲು ಪರಿಸ್ಥಿತಿಯ ಕೂಲಂಕಷ ಅವಲೋಕನ ನಡೆಸಿ ಸೂಕ್ತ ಸಮರ್ಥನೆಯೊಂದಿಗೆ ಮಾಡಬೇಕು ಎಂದು ಹೇಳಿದೆ.

               ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿದ ಸಂವಿಧಾನದ 370ನೇ ವಿಧಿಯ ರದ್ದತಿ ಕುರಿತಂತೆ ತುಂಬಾ ಸಹಜವೆಂಬಂತೆ ಪ್ರೊಫೆಸರ್‌ ಪೋಸ್ಟ್‌ ಮಾಡಿದ್ದರೆಂದು ಹೊರನೋಟಕ್ಕೆ ತಿಳಿದುಬರುತ್ತದೆ ಎಂದು ತನ್ನ ಎಪ್ರಿಲ್‌ 10 ರ ಆದೇಶದಲ್ಲಿ ನ್ಯಾಯಮೂರ್ತಿಗಳಾದ ಎಸ್‌ ಬಿ ಶುಕ್ರೆ ಮತ್ತು ಎಂ ಎಂ ಸತಯೆ ಅವರ ವಿಭಾಗೀಯ ಪೀಠ ಹೇಳಿದೆ.

           ತಮ್ಮ ವಿರುದ್ಧ ಎಫ್‌ಐಆರ್‌ ರದ್ದುಗೊಳಿಸಬೇಕೆಂದು ಕೋರಿ 26 ವರ್ಷದ ಜಾವೇದ್‌ ಅಹ್ಮದ್‌ ಹಜಮ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಹಜಮ್‌ ವಿರುದ್ಧ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಹಟ್ಕನಂಗಲೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

                ಕೊಲ್ಲಾಪುರ ಕಾಲೇಜಿನಲ್ಲಿ ಪ್ರೊಫೆಸರ್‌ ಆಗಿದ್ದ ಹಜಮ್‌ ಅವರು ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯವರಾಗಿದ್ಧಾರೆ. ಹಜಮ್‌ ಅವರು ಎಪ್ರಿಲ್‌ 13 ಹಾಗೂ 15, 2022 ರ ನಡುವೆ ʻಆಗಸ್ಟ್‌ 5 ಜಮ್ಮು ಕಾಶ್ಮೀರದ ಕರಾಳ ದಿನʼ ʼವಿಧಿ 370 ರದ್ದುಗೊಳಿಸಲಾಗಿದೆ, ನಮಗೆ ಸಂತೋಷವಿಲ್ಲ, ʻ14ನೇ ಆಗಸ್ಟ್‌ ಹ್ಯಾಪಿ ಇಂಡಿಪೆಂಡೆನ್ಸ್‌ ಡೇ ಪಾಕಿಸ್ತಾನ್‌ʼ ಎಂದು ಪೋಸ್ಟ್‌ ಮಾಡಿದ್ದರು.

          ಆದರೆ ಯಾವುದೇ ಕೆಟ್ಟ ಉದ್ದೇಶದಿಂದ ತಾವು ವಾಟ್ಸ್ಯಾಪ್‌ ಸ್ಟೇಟಸ್‌ ಹಾಕಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ವಿಧಿ 370 ಇದರ ಕುರಿತ ಮೊದಲ ಸ್ಟೇಟಸ್‌ ಐಪಿಸಿ ಸೆಕ್ಷನ್‌ 153ಎ ಇದರ ಉಲ್ಲಂಘನೆ ಆದರೆ ಪಾಕ್‌ ಸ್ವಾತಂತ್ರ್ಯ ದಿನದ ಕುರಿತು ಪೋಸ್ಟ್‌ ಉಲ್ಲಂಘನೆಯಲ್ಲ ಎಂದು ನ್ಯಾಯಾಲಯ ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries