ಭೋಪಾಲ್: ಅಪ್ರಾಪ್ತೆ ಅತ್ಯಾಚಾರ ಸಂತ್ರಸ್ತೆಯೊಬ್ಬಳ ವಯಸ್ಸನ್ನು ನಿರ್ಧರಿಸಲು ಆಧಾರ್ (Aadhaar) ಕಾರ್ಡ್ ಪುರಾವೆಯಾಗದು ಎಂದು ಮಧ್ಯ ಪ್ರದೇಶ ಹೈಕೋರ್ಟಿನ (Madhya Pradesh High Court) ಜಬಲ್ಪುರ ಪೀಠ ಇತ್ತೀಚೆಗೆ ಹೇಳಿದೆ.
0
samarasasudhi
ಏಪ್ರಿಲ್ 24, 2023
ಭೋಪಾಲ್: ಅಪ್ರಾಪ್ತೆ ಅತ್ಯಾಚಾರ ಸಂತ್ರಸ್ತೆಯೊಬ್ಬಳ ವಯಸ್ಸನ್ನು ನಿರ್ಧರಿಸಲು ಆಧಾರ್ (Aadhaar) ಕಾರ್ಡ್ ಪುರಾವೆಯಾಗದು ಎಂದು ಮಧ್ಯ ಪ್ರದೇಶ ಹೈಕೋರ್ಟಿನ (Madhya Pradesh High Court) ಜಬಲ್ಪುರ ಪೀಠ ಇತ್ತೀಚೆಗೆ ಹೇಳಿದೆ.
ಅತ್ಯಾಚಾರ ಸಂತ್ರಸ್ತೆ ಅಪ್ರಾಪ್ತೆಯ ವಯಸ್ಸನ್ನು ತೀರ್ಮಾನಿಸಲು ನ್ಯಾಯಾಲಯಗಳು ಬಾಲನ್ಯಾಯ ಕಾಯಿದೆಯಡಿಯಲ್ಲಿ ಉಲ್ಲೇಖಿಸಲಾದ ಪ್ರಕ್ರಿಯೆಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ವಿವೇಕ್ ಅಗರ್ವಾಲ್ ಅವರ ಏಕಸದಸ್ಯ ಪೀಠ ಹೇಳಿದೆ. ಈ ಕಾಯಿದೆ ಪ್ರಕಾರ ವ್ಯಕ್ತಿಯೊಬ್ಬನ ವಯಸ್ಸನ್ನು ತೀರ್ಮಾನಿಸಲು ಜನನ ಪ್ರಮಾಣಪತ್ರ ಮತ್ತು ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ ಅನ್ನು ಅವಲಂಬಿಸಬೇಕಾಗಿದೆ. ಇವುಗಳು ಲಭ್ಯವಿಲ್ಲದೇ ಇದ್ದರೆ ವ್ಯಕ್ತಿಯ ವಯಸ್ಸನ್ನು ತೀರ್ಮಾನಿಸಲು ಕಾಯಿದೆಯು ಒಸ್ಸಿಫಿಕೇಶನ್ ಪರೀಕ್ಷೆಯನ್ನು ಶಿಫಾರಸು ಮಾಡಿದೆ.
ಆಧಾರ್ ಅನ್ನು ವಯಸ್ಸಿನ ಆಧಾರವೆಂದು ಒಪ್ಪಿಕೊಳ್ಳಲು ವಿಶೇಷ ನ್ಯಾಯಾಲಯವೊಂದು ತನ್ನ ಎಪ್ರಿಲ್ 8ರ ಆದೇಶದಲ್ಲಿ ನಿರಾಕರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಜಸ್ಟಿಸ್ ಅಗರ್ವಾಲ್ ವಿಚಾರಣೆ ನಡೆಸುತ್ತಿದ್ದರು.
ಆಧಾರ್ ಅನ್ನು ಉನ್ನತ ದಾಖಲೆಯೆಂದು ಪರಿಗಣಿಸಿ ವಯಸ್ಸನ್ನು ತೀರ್ಮಾನಿಸಲು ಬಳಸಬೇಕು ಎಂದು ಪ್ರಕರಣವೊಂದರಲ್ಲಿ ದಿಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಅರ್ಜಿದಾರರು ಉಲ್ಲೇಖಿಸಿದ್ದರು.
ಆದರೆ ದಿಲ್ಲಿ ಹೈಕೋರ್ಟ್ ಪೀಠವು ಸುಪ್ರೀಂ ಕೋರ್ಟಿನ ಈ ಹಿಂದಿನ ತೀರ್ಪನ್ನು ಉಲ್ಲೇಖಿಸಿತ್ತಲ್ಲದೆ ಆಧಾರ್ ಕಾರ್ಡ್ ಸರ್ಕಾರ ನೀಡಿದ ಕಾರ್ಡ್ ಎಂಬ ಒಂದೇ ಕಾರಣಕ್ಕೆ ಬಾಲನ್ಯಾಯ ಕಾಯಿದೆಯ ನಿಯಮಗಳನ್ನು ಬದಿಗೆ ಸರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.