HEALTH TIPS

ಕೋಮು ಸೌಹಾರ್ದಕ್ಕೆ ಸಾಕ್ಷಿಯಾದ ದೇವಸ್ಥಾನಗಳಲ್ಲಿ ಸಾಮೂಹಿಕ ಇಫ್ತಾರ್ ಕೂಟ

 

                ಮಲಪ್ಪುರಂ: ಇಲ್ಲಿಯ ಎರಡು ದೇವಸ್ಥಾನಗಳ ಆಡಳಿತ ಸಮಿತಿಗಳು ಪವಿತ್ರ ರಮಝಾನ್ ಮಾಸದಲ್ಲಿ ಮುಸ್ಲಿಮರಿಗಾಗಿ ಸಾಮೂಹಿಕ ಇಫ್ತಾರ್ ಕೂಟಗಳನ್ನು ಏರ್ಪಡಿಸುವ ಮೂಲಕ ಕೋಮು ಸೌಹಾರ್ದತೆಯನ್ನು ಮೆರೆದಿವೆ.

                      ಒತ್ತಲೂರಿನ ಶ್ರೀ ಪುದುವೆಪ್ಪು ಮಣಲಿಯಾರ್ಕಾವು ಭಗವತಿ ದೇವಸ್ಥಾನ ಮತ್ತು ತಿರೂರು ಸಮೀಪದ ವಣಿಯನ್ನೂರಿನ ಚತಂಗಾಡು ಶ್ರೀ ಮಹಾವಿಷ್ಣು ದೇವಸ್ಥಾನದ ಸಮಿತಿಗಳು ಅನುಕ್ರಮವಾಗಿ ಎ.7 ಮತ್ತು ಮಾ.28ರಂದು ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ಇಫ್ತಾರ್ ಕೂಟಗಳನ್ನು ಆಯೋಜಿಸಿದ್ದವು.

                 ಎರಡೂ ಕೂಟಗಳು ಮುಸ್ಲಿಮರ ಸಾಮೂಹಿಕ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗಿದ್ದವು ಎಂದು newindianexpress.com ವರದಿ ಮಾಡಿದೆ.

                  'ಇದು ಪ್ರದೇಶದಲ್ಲಿಯ ಯುವಕರ ಉಪಕ್ರಮವಾಗಿತ್ತು. ಹಿಂದು ಮತ್ತು ಮುಸ್ಲಿಂ ಸಮುದಾಯಗಳ ಜನರ ನಡುವೆ ಬಾಂಧವ್ಯವನ್ನು ಬಲಗೊಳಿಸುವುದು ನಮ್ಮ ಉದ್ದೇಶವಾಗಿದೆ. ಧಾರ್ಮಿಕ ಸೌಹಾರ್ದತೆಯು ಮುಖ್ಯವಾಗಿದ್ದು,ಪ್ರತಿಯೊಂದೂ ಹಬ್ಬವನ್ನು ಶಾಂತಿಯುತ ಮತ್ತು ಖುಷಿಯ ವಾತಾವರಣದಲ್ಲಿ ಒಟ್ಟಾಗಿ ಆಚರಿಸಲು ನಾವು ಬಯಸಿದ್ದೇವೆ ' ಎಂದು ಶ್ರೀ ಪುತುವೆಪ್ಪು ಮಣಲಿಯಾರ್ಕಾವು ಭಗವತಿ ದೇವಸ್ಥಾನದ ಕಾರ್ಯದರ್ಶಿ ಕೃಷ್ಣನ್ ಪವಿತ್ತಪುರಂ ಹೇಳಿದರು.

               'ಈ ವರ್ಷದ ರಮಝಾನ್ ಮಾಸದಲ್ಲಿ ನಡೆದ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾಪನಾ ಉತ್ಸವದಲ್ಲಿ ಮುಸ್ಲಿಮ್ ವ್ಯಕ್ತಿಯೋರ್ವರು ಅನ್ನದಾನವನ್ನು ಪ್ರಾಯೋಜಿಸಿದ್ದರು. ಮುಂಬರುವ ವರ್ಷಗಳಲ್ಲೂ ಸಾಮೂಹಿಕ ಇಫ್ತಾರ್ ಕೂಟಗಳ ಆಯೋಜನೆಯನ್ನು ನಾವು ಮುಂದುವರಿಸುತ್ತೇವೆ ' ಎಂದು ಇಫ್ತಾರ್ ಕೂಟದ ಹಿಂದಿದ್ದ ಯುವಜನರಲ್ಲಿ ಒಬ್ಬರಾದ ದಿಜಿತ್ ಕೆ.ಹೇಳಿದರು.

                       ಚತಂಗಾಡು ಶ್ರೀ ಮಹಾವಿಷ್ಣು ದೇವಸ್ಥಾನವು ಎರಡನೇ ಬಾರಿಗೆ ಇಫ್ತಾರ್ ಕೂಟವನ್ನು ಆಯೋಜಿಸಿತ್ತು.

               'ಹಿಂದಿನ ವರ್ಷದಂತೆ ಈ ವರ್ಷವೂ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾಪನೆ ಉತ್ಸವವು ರಮಝಾನ್ ಮಾಸದಲ್ಲಿ ನಡೆದಿದ್ದರಿಂದ ಮುಸ್ಲಿಮ್ ಸಮುದಾಯದ ಜನರಿಗೆ ಅನ್ನದಾನಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ವಾರ್ಷಿಕ ಉತ್ಸವದ ಮರುದಿನ ನಾವು ಸಾಮೂಹಿಕ ಇಫ್ತಾರ್ ಕೂಟವನ್ನು ಏರ್ಪಡಿಸಿದ್ದೆವು. ಮುಂದಿನ ವರ್ಷವೂ ವಾರ್ಷಿಕ ಪ್ರತಿಷ್ಠಾಪನಾ ಉತ್ಸವವು ರಮಝಾನ್ ಮಾಸದಲ್ಲಿ ಬಂದರೆ ನಾವು ಸಾಮೂಹಿಕ ಇಫ್ತಾರ್ ಕೂಟವನ್ನು ಆಯೋಜಿಸುತ್ತೇವೆ' ಎಂದು ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಲಕ್ಷ್ಮಣನ್ ಕೆ.ಕೆ. ತಿಳಿಸಿದರು.

                ವಣಿಯನ್ನೂರಿನಲ್ಲಿ ಸಾಮೂಹಿಕ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದ ಐಯುಎಂಎಲ್ ನಾಯಕ ಪಾಣಕ್ಕಾಡ್ ರಶೀದ್ ಅಲಿ ಶಿಹಾಬ್ ತಂಙಳ್ ಅವರು ದೇವಸ್ಥಾನದ ಕ್ರಮವನ್ನು ಶ್ಲಾಘಿಸಿದರು. 'ದೇವಸ್ಥಾನವು ಇತರರಿಗೆ ಅನುಕರಣೀಯ ಮಾದರಿಯನ್ನು ಸ್ಥಾಪಿಸಿದೆ. ದೇಶದಲ್ಲಿಯ ಎಲ್ಲ ಸಮುದಾಯಗಳು ಸೌಹಾರ್ದದಿಂದ ಬಾಳಬೇಕು. ಪರಸ್ಪರರನ್ನು ಗೌರವಿಸುತ್ತ ಮತ್ತು ನೆರವಾಗುತ್ತ ನಾವು ಮುನ್ನಡೆಯಬೇಕು. ನಮ್ಮ ಹೃದಯದಲ್ಲಿ ದ್ವೇಷಕ್ಕೆ ಜಾಗವಿರಬಾರದು ' ಎಂದು ಅವರು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries