HEALTH TIPS

ಬೇಸಿಗೆಯಲ್ಲಿ ಬೆರಳುಗಳಲ್ಲಿ ಬೆವರು ಕಜ್ಜಿಗೆ ಪರಿಹಾರವೇನು?

 ಬೇಸಿಗೆಯಲ್ಲಿ ಕೆಲವರಿಗೆ ಕೈ ಬೆರಳುಗಳ ನಡುವೆ ಚಿಕ್ಕ-ಚಿಕ್ಕ ಗುಳ್ಳೆಗಳು ಏಳುವುದು, ಆ ಗುಳ್ಳೆಗಳಲ್ಲಿ ನೀರು ತುಂಬಿರುತ್ತದ, ಒಡೆದಾಗ ಮತ್ತಷ್ಟು ಹರಡುವುದು. ಅಲ್ಲದೆ ಈ ರೀತಿ ಬರುವ ಗುಳ್ಳೆಗಳು ತುಂಬಾನೇ ತುರಿಕೆ ಹೊಂದಿರುತ್ತದೆ.

ಇದೀಗ ಅಂತೂ ಬಿಸಿಲಿನ ಝಳ ಅಧಿಕವೇ ಇದೆ. ಹಾಗಾಗಿ ಈ ಬಗೆಯ ಸಮಸ್ಯೆ ಅಧಿಕವೇ ಇರುತ್ತದೆ. ಈ ರೀತಿಯಾದಾಗ ಸೆಪ್ಟಿಕ್ ಪೌಡರ್ ಹಾಕಿದಾಗ ಕಡಿಮಯಾಗುವುದು. ಉಗುರುಗಳಲ್ಲಿ ಕಂಡು ಬರುವ ಈ ಗುಳ್ಳೆ ಅಥವಾ ಕಜ್ಜಿಗಳಿಗೆ ವೈದ್ಯಕೀಯ ಭಾಷೆಯಲ್ಲಿ dyshidrotic eczema ಎಂದು ಕರೆಯಲಾಗುವುದು. ಇದರ ಕುರಿತ ಹೆಚ್ಚಿನ ವಿವರ ನೋಡುವುದಾದರೆ

ಲಕ್ಷಣಗಳು
* ತುಂಬಾನೇ ತುರಿಕೆ
* ಉರಿ
* ಅಂಗೈ ಬಿಸಿಯಾಗುವುದು
* ಚುಚ್ಚಿದ ಅನುಭವ
* ಚಿಕ್ಕ-ಚಿಕ್ಕ ಗುಳ್ಳೆಗಳು ಏಳುವುದು
* ಉಗುರಿನ ಸುತ್ತ ಇರುವ ತ್ವಚೆಯಲ್ಲಿ ಬದಲಾವಣೆ

ಕಾರಣಗಳು
ಈ ಬಗೆಯ ತ್ವಚೆ ಸಮಸ್ಯೆಗೆ ನಿಖರ ಕಾರಣಗಳಿಲ್ಲ, ಈ ಕಾರಣಗಳಿಂದ ಉಂಟಾಗಬಹುದು
* ಒತ್ತಡ
* ಕೆಲವೊಂದು ಲೋಹಗಳ ಅಲರ್ಜಿ
* ಬೆವರು
* ಇತರ ಅಲರ್ಜಿ
* ಶುಷ್ಕ ವಾತಾವರಣ

ಯಾರಲ್ಲಿ ಕಂಡು ಬರುವುದು
* ಬೇರೆ ರೀತಿಯ ತುರಿಕೆ ಸಮಸ್ಯೆಯಿದ್ದರೆ
* ಧೂಳಿನ ಅಲರ್ಜಿ ಸಮಸ್ಯೆಯಿದ್ದಾಗ
* ಕೆಲವೊಂದು ಲೋಹಗಳಿಗೆ ಅಲರ್ಜಿಯಾಗುತ್ತಿದ್ದರೆ
* ಕೌಟುಂಬಿಕ ಇತಿಹಾಸ
* ಸಿಮೆಂಟ್‌ನಲ್ಲಿ ಕೆಲಸ ಮಾಡುವವರಿಗೆ

ಚಿಕಿತ್ಸೆಯೇನು?
* ಮೆಡಿಕಲ್ ಮಾಯಿಶ್ಚರೈರಸ್
* ಬ್ಯಾಕ್ಟಿರಿಯಾ ಸೋಂಕಿನ ವಿರುದ್ಧ ಔಷಧ ತೆಗೆದುಕೊಳ್ಳುವುದು
* ಬೋಟೊಕ್ಸ್ ಇಂಜೆಕ್ಷನ್
* ಫೋಟೋಥೆರಪಿ

ಮನೆ ಮದ್ದೇನು?
* ಕೈಗಳನ್ನು ಹದ ಬಿಸಿ ನೀರಿನಲ್ಲಿ ತೊಳೆಯಿರಿ
* ಮಾಮೂಲಿ ಸೋಪ್‌ ಬದಲಿಗೆ ಮೆಡಿಕಲ್ ಸೋಪ್ ಬಳಸಿ
* ಕ್ರೀಮ್ ಅಥವಾ ಆಯಿಂಟ್ಮೆಂಟ್ ಹಚ್ಚಿದ ಮೇಲೆ ಬ್ಯಾಂಡೇಜ್ ಹಚ್ಚಿ.

ಈ ಬಗೆಯ ಆಹಾರಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ
* ಸೋಯಾ ಪ್ರಾಡೆಕ್ಟ್
* ಕೋಕಾ ಪುಡಿ
* ಗೋಡಂಬಿ
* ಅಂಜೂರ

ತಡೆಗಟ್ಟುವುದು
* ಕೈ ತುಂಬಾ ಡ್ರೈಯಾಗುವುದನ್ನು ತಡೆಗಟ್ಟಿ
* ಏನಾದರೂ ಕೆಲಸ ಮಾಡುವಾಗ ಕೈಗಳಿಗೆ ಗ್ಲೌಸ್ ಬಳಸಿ
*ಕೈ ಬೆರಲುಗಳಿಗೆ ರಿಂಗ್ ಬಳಸಬೇಡಿ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries