ನವದೆಹಲಿ: ಐತಿಹಾಸಿಕ ಕೇಶವಾನಂದ ಭಾರತಿ ಪ್ರಕರಣಕ್ಕೆ ಸಂಬಂಧಿಸಿದ ವಾದ, ಲಿಖಿತ ರೂಪದ ಹೇಳಿಕೆಗಳು ಮತ್ತು ತೀರ್ಪಿನ ಕುರಿತು ಮಾಹಿತಿ ಒಳಗೊಂಡಿರುವ ವೆಬ್‌ಪೇಜ್‌ಅನ್ನು ಸಂಶೋಧಕರು ಸೇರಿ ದೇಶದ ಜನರಿಗೆ ಸುಪ್ರೀಂ ಕೋರ್ಟ್ ಸೋಮವಾರ ಅರ್ಪಿಸಿತು.
0
samarasasudhi
ಏಪ್ರಿಲ್ 25, 2023
ನವದೆಹಲಿ: ಐತಿಹಾಸಿಕ ಕೇಶವಾನಂದ ಭಾರತಿ ಪ್ರಕರಣಕ್ಕೆ ಸಂಬಂಧಿಸಿದ ವಾದ, ಲಿಖಿತ ರೂಪದ ಹೇಳಿಕೆಗಳು ಮತ್ತು ತೀರ್ಪಿನ ಕುರಿತು ಮಾಹಿತಿ ಒಳಗೊಂಡಿರುವ ವೆಬ್‌ಪೇಜ್‌ಅನ್ನು ಸಂಶೋಧಕರು ಸೇರಿ ದೇಶದ ಜನರಿಗೆ ಸುಪ್ರೀಂ ಕೋರ್ಟ್ ಸೋಮವಾರ ಅರ್ಪಿಸಿತು.
1973ರ ಏಪ್ರಿಲ್ 24ರಂದು ಈ ಪ್ರಕರಣದ ತೀರ್ಪು ಪ್ರಕಟಿಸಲಾಗಿತ್ತು. ಈ ತೀರ್ಪು ಹೊರಬಿದ್ದು ಸೋಮವಾರಕ್ಕೆ 50 ವರ್ಷಗಳು ತುಂಬಿದ ಸಂದರ್ಭದಲ್ಲಿ ವೆಬ್‌ಪೇಜ್‌ಅನ್ನು ಅರ್ಪಿಸಲಾಗಿದೆ.
'ಕೇಶವಾನಂದ ಭಾರತಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ಒಳಗೊಂಡಿರುವ ವೆಬ್‌ಪೇಜನ್ನು ನಾವು ಸಂಶೋಧಕರ ಜಗತ್ತಿಗೆ ಅರ್ಪಿಸುತ್ತಿದ್ದೇವೆ' ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ಪೀಠವು ಹೇಳಿತು. ಕೋರ್ಟ್ ಕೊಠಡಿಯಲ್ಲಿ ಹಾಜರಿದ್ದ ವಕೀಲರು ಸುಪ್ರೀಂ ಕೋರ್ಟ್‌ನ ಈ ನಡೆಯನ್ನು ಸ್ವಾಗತಿಸಿದರು. ಈ ವೆಬ್‌ಪೇಜ್‌ನಿಂದ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ವಕೀಲರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
13 ನ್ಯಾಯಮೂರ್ತಿಗಳನ್ನು ಒಳಗೊಂಡಿದ್ದ ನ್ಯಾಯಪೀಠವು ಈ ತೀರ್ಪನ್ನು ನೀಡಿತ್ತು. ಪ್ರಜಾಪ್ರಭುತ್ವ, ನ್ಯಾಯಾಂಗದ ಸ್ವಾತಂತ್ರ್ಯ, ಅಧಿಕಾರದ ವರ್ಗೀಕರಣ ಮತ್ತು ಜಾತ್ಯತೀತತೆ ಸೇರಿ ಸಂವಿಧಾನದ ಮೂಲ ಸ್ವರೂಪವನ್ನು ಬದಲಾಯಿಸುವ ನಿಟ್ಟಿನಲ್ಲಿ ಸಂಸತ್ತು ಸಾಂವಿಧಾನಿಕ ತಿದ್ದುಪಡಿಯನ್ನು ತರುವುದನ್ನು ನಿರ್ಬಂಧಿಸಿ ಈ ತೀರ್ಪು ನೀಡಲಾಗಿತ್ತು.