HEALTH TIPS

ಗೇರುತೋಟಗಳಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ಅವಕಾಶ-ಪರಿಸರ ಸಮಿತಿಯಿಂದ ವಿರೋಧ

 



               ಕಾಸರಗೋಡು: ಕೇರಳ ತೋಟಗಾರಿಕಾ ನಿಗಮ(ಪಿಸಿಕೆ)ದ ಕಾಸರಗೋಡು ಜಿಲ್ಲೆಯ ಗೇರು ತೋಟ ವ್ಯಾಪಿಸಿರುವ ಪ್ರದೇಶದಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ಅವಕಾಶಮಾಡಿಕೊಡುತ್ತಿರುವುದು ಮತ್ತೊಂದು ಪರಿಸರ ದುರಂತಕ್ಕೆ ಆಹ್ವಾನ ನೀಡಲಿರುವುದಾಗಿ ಜಿಲ್ಲಾ ಪರಿಸರ ಹೋರಟ ಸಮಿತಿ ಎಚ್ಚರಿಕೆ ನೀಡಿದೆ.

          ಗೇರುಬೀಜ ಅಭಿವೃದ್ಧಿಪಡಿಸುವ ನೆಪದಲ್ಲಿ 25ವರ್ಷಗಳಿಗೂ ಹೆಚ್ಚುಕಾಲ ನಿರಂತರ ಎಂಡೋಸಲ್ಫಾನ್ ವಿಷಮಳೆ ಸುರಿಸಿರುವುದರ ದುಷ್ಪರಿಣಾಮ ಇನ್ನೂ ಕಣ್ಣಮುಂದಿರುವ ಮಧ್ಯೆ ಮತ್ತೆ ವ್ಯಾಪಕವಾಗಿ ಕೆಂಪುಕಲ್ಲು ಉತ್ಖನನಕ್ಕೆ ಅವಕಾಶಮಾಡಿಕೊಡಲು ಮುಂದಾಗಿರುವ ಸರ್ಕಾರದ ಧೋರಣೆ ಆತ್ಮಹತ್ಯೆಗೆ ಸಮಾನವಾಗಿದೆ. ಪ್ರಕೃತಿಗೆ ಹಾನಿಯೆಸಗಿ ಹಣ ಗಳಿಸುವ ಸರ್ಕಾರದ ಧೋರಣೆ ಜೀವಸಂಕುಲದ ಮೇಲೆ ಗೋರಿ ತೋಡಿದಂತಾಗಲಿದೆ. ವ್ಯಾಪಕ ಉತ್ಖನನ ಪರಿಸರ ಹಾನಿ ತಂದೊಡ್ಡುವುದಲ್ಲದೆ, ಅಂತರ್ಜಲಮಟ್ಟದ ಕುಸಿತಕ್ಕೂ ಕಾರಣವಾಗಲಿರುವುದರಿಂದ ಪಿಸಿಕೆ ಜಾಗದಲ್ಲಿ ಗಣಿಗಾರಿಕೆಗೆ ಅವಕಾಶ ಮಾಡದಿರುವಂತೆ ಪರಿಸರ ಸಮಿತಿ ಆಗ್ರಹಿಸಿದೆ. ವಿರೋಧ ಲೆಕ್ಕಿಸದೆ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಲ್ಲಿ ಪರಿಸರ ಸಮಿತಿಯಿಂದ ಪ್ರಬಲ ಹೋರಾಟ ನಡೆಸಲೂ ಸಮಿತಿ ಸಭೆ ತೀರ್ಮಾನಿಸಿದೆ.

             ವಕೀಲ  ಟಿ.ವಿ.ರಾಜೇಂದ್ರನ್, ಪೆÇ್ರ: ಎಂ.ಗೋಪಾಲನ್, ಪಿ.ಕೃಷ್ಣನ್, ರಾಮಕೃಷ್ಣನ್ ವಾಣಿಯಂಬರ, ಪವಿತ್ರನ್ ತೋಯಮಾಲ್, ಮನೋಜ್,  ಸುಕುಮಾರನ್ ಪನಯಾಲ್, ಭರತನ್ ಪಲ್ಲಂಜಿ, ಮ್ಯಾಥ್ಯೂ ಕುರುವಿಲ, ಕಲಾಧರನ್ ಕೆ.ವಿ.ಜಿಜು, ಟಿ.ಶೋಭನ, ಕೆ.ಸುಶಾಂತ್, ಪಿ.ಯು. ಕುಞÂಕೃಷ್ಣನ್ ನಾಯರ್, ಸುರೇಶ್ ಮಾಲೋಮ್. ಪಿ.ವಿ.ಜಯರಾಜ್, ಅಂಬಲತ್ತರ ಕುಞÂಕೃಷ್ಣನ್ ಉಪಸ್ಥಿತರಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries