HEALTH TIPS

ಜಾತಿ ತಾರತಮ್ಯ ತಡೆಗೆ ಯುಜಿಸಿ ಮಾರ್ಗಸೂಚಿ ಪ್ರಕಟ

 

             ನವದೆಹಲಿ: ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ನಿಯಮಾವಳಿಯನ್ನು ಪರಿಷ್ಕರಿಸಿ ಆದೇಶ ಹೊರಡಿಸಿದ್ದು, ಕಾಲೇಜುಗಳ ಆವರಣದಲ್ಲಿ ಜಾತಿ ಆಧಾರಿತ ತಾರತಮ್ಯಕ್ಕೆ ಕಡಿವಾಣ ಹಾಕುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

                 ಹೊಸ ನಿಯಮಾವಳಿ ಅನ್ವಯ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಿ 15 ದಿನಗಳೊಳಗೆ ಬಗೆಹರಿಸಲು ಸಮಿತಿ ರಚಿಸಬೇಕು. ಇದಕ್ಕೆ ಒಂಬುಡ್ಸ್‌ಮನ್‌ ನೇಮಿಸಬೇಕು ಎಂದು ಸೂಚಿಸಿದೆ.

                   ಸಮಿತಿಯಲ್ಲಿ ಐವರು ಪ್ರಾಧ್ಯಾಪಕರು ಇರಬೇಕು ಅಥವಾ ಹಿರಿಯ ಬೋಧಕರು ಇರಬೇಕು. ಇವರ ಪೈಕಿ ಒಬ್ಬರನ್ನು ಮುಖ್ಯಸ್ಥರನ್ನಾಗಿ ನೇಮಿಸಬೇಕು. ವಿದ್ಯಾರ್ಥಿಗಳ ವಿಭಾಗದಿಂದ ಪ್ರತಿನಿಧಿಸುವವರು ಸಹಪಠ್ಯ ಚಟುವಟಿಕೆಯಲ್ಲಿ ಉತ್ತಮ ಸಾಮರ್ಥ್ಯ ತೋರಿರಬೇಕು ಅಥವಾ ಶೈಕ್ಷಣಿಕ ಮಟ್ಟದಲ್ಲಿ ಉನ್ನತ ಸಾಧನೆ ಮಾಡಿದವರನ್ನು ನಾಮ ನಿರ್ದೇಶನ ಮಾಡಬೇಕು. ಸದಸ್ಯರ ಪೈಕಿ ಒಬ್ಬರು ಮಹಿಳೆ ಇರಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗದ ಪ್ರತಿನಿಧಿಸುವವರನ್ನು ಸದಸ್ಯರನ್ನಾಗಿ ನೇಮಿಸಬೇಕು ಎಂದು ಸೂಚಿಸಿದೆ.

               ವಿಶ್ರಾಂತ ಕುಲಪತಿ ಅಥವಾ ನಿವೃತ್ತ ಪ್ರಾಧ್ಯಾಪಕರನ್ನೇ ಕಮಿಟಿಯ ಮುಖ್ಯಸ್ಥರನ್ನಾಗಿ ನೇಮಿಸಬೇಕು. ದಶಕಗಳ ಕಾಲ ಬೋಧನೆಯ ಅನುಭವ ಹೊಂದಿದವರಿಗೆ ಪ್ರಥಮ ಆದ್ಯತೆ ನೀಡಬೇಕು ಎಂದು ತಿಳಿಸಿದೆ.


'ಜಾತಿ ಆಧಾರಿತ ತಾರತಮ್ಯ ನಿರ್ಮೂಲನೆಯೇ ಯುಜಿಸಿಯ ಗುರಿ. ಉನ್ನತ ಶಿಕ್ಷಣದ ಹಂತದಲ್ಲಿ ಈ ಅನಿಷ್ಟ ಪದ್ಧತಿಯ ನಿರ್ಮೂಲನೆ ಸಂಬಂಧ ನಿಯಮಿತವಾಗಿ ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಲಾಗುತ್ತಿದೆ. ಈ ಬಗ್ಗೆ ನಿಗಾ ಕೂಡ ವಹಿಸಲಿದೆ' ಎಂದು ಯುಜಿಸಿ ಮುಖ್ಯಸ್ಥ ಎಂ. ಜಗದೀಶ್ ಕುಮಾರ್‌ ತಿಳಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries