HEALTH TIPS

ಪ್ಲಾಸ್ಟಿಕ್ ಸರ್ಜರಿಯಿಂದ ವೈದಿಕ ಖಗೋಳಶಾಸ್ತ್ರದವರೆಗೆ ಪ್ರಾಚೀನ ಭಾರತದ ಜ್ಞಾನಕ್ಕೆ ಯುಜಿಸಿ ಒತ್ತು: ವರದಿ

                ವದೆಹಲಿ: ಪ್ರಾಚೀನ ಸಂಸ್ಕೃತ ಗ್ರಂಥ ಸುಶ್ರುತ ಸಂಹಿತಾದಲ್ಲಿ ಬಣ್ಣಿಸಿರುವ ಪ್ಲಾಸ್ಟಿಕ್ ಸರ್ಜರಿ ಮತ್ತು ವೈದಿಕ ಖಗೋಳಶಾಸ್ತ್ರ ಅಧ್ಯಯನಕ್ಕಾಗಿ ವಿವಿ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಶೀಘ್ರವೇ ಉತ್ತೇಜಿಸಲ್ಪಡಬಹುದು. ಆಯುರ್ವೇದ ಮತ್ತು ಸಿದ್ಧ ಸೇರಿದಂತೆ ಭಾರತೀಯ ವೈದ್ಯ ಪದ್ಧತಿಯ ಕನಿಷ್ಠ ಕ್ರೆಡಿಟ್ ಕೋರ್ಸ್ಗಳನ್ನು ತೆಗೆದುಕೊಳ್ಳುವಂತೆ ಆಧುನಿಕ ವೈದ್ಯಕೀಯ ವಿದ್ಯಾರ್ಥಿಗಳನ್ನೂ ಪ್ರೇರೇಪಿಸಲಾಗುವುದು ಎಂದು indianexpress.com ವರದಿ ಮಾಡಿದೆ.

                  ಈ ಪ್ರಸ್ತಾವಗಳು ಯುಜಿಸಿಯ ಕರಡು 'ಉನ್ನತ ಶಿಕ್ಷಣದಲ್ಲಿ ಭಾರತೀಯ ಜ್ಞಾನವನ್ನು ಸೇರ್ಪಡೆಗೊಳಿಸಲು ಮಾರ್ಗಸೂಚಿ'ಗಳ ಭಾಗವಾಗಿವೆ. ಈ ಮಾರ್ಗಸೂಚಿಗಳು ಭಾರತೀಯ ಜ್ಞಾನ ವ್ಯವಸ್ಥೆ (ಐಕೆಎಸ್)ಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಕೋರ್ಸ್ಗಳ ಅಭಿವೃದ್ಧಿಗಾಗಿ ಕಾಲೇಜುಗಳು ಮತ್ತು ವಿವಿಗಳಿಗೆ ನೆರವಾಗುವ ಉದ್ದೇಶವನ್ನು ಹೊಂದಿವೆ.

         'ನಮ್ಮ ದೇಶವನ್ನು ಜ್ಞಾನ ಆಧಾರಿತ ಸಮಾಜವಾಗಿ ಹೆಚ್ಚು ಸಮಗ್ರವಾಗಿ ನೋಡುವ ಜೊತೆಗೆ ಐಕೆಸ್ ಅಧ್ಯಯನವು ಸುಸ್ಥಿರ ಮಾನವ ಸಮುದಾಯಗಳ ನಿರ್ಮಾಣಕ್ಕಾಗಿ ಹೊಸ ದೃಷ್ಟಿಕೋನಗಳನ್ನು ಕಂಡುಕೊಳ್ಳಲು ಸಮಕಾಲೀನ ಜ್ಞಾನದೊಂದಿಗೆ ಅದನ್ನು ಹೇಗೆ ಸಂಯೋಜಿಸಬಹುದು ಎಂಬ ತಿಳುವಳಿಕೆಯನ್ನು ನಮ್ಮ ವಿದ್ಯಾರ್ಥಿಗಳಿಗೆ ನೀಡುತ್ತದೆ' ಎಂದು ಯುಜಿಸಿ ಅಧ್ಯಕ್ಷ ಎಂ.ಜಗದೀಶ ಕುಮಾರ ಹೇಳಿದರು.

              ಒಂದು ಪರಿಕಲ್ಪನೆಯಾಗಿ ಐಕೆಸ್ ಅನ್ನು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ರ ಮೂಲಕ ಪರಿಚಯಿಸಲಾಗಿತ್ತು.

                 ಪದವಿ ತರಗತಿ ಅಥವಾ ಸ್ನಾತಕೋತ್ತರ ತರಗತಿಗೆ ದಾಖಲಾಗುವ ಪ್ರತಿಯೋರ್ವ ವಿದ್ಯಾರ್ಥಿಯು ಪದವಿಯನ್ನು ಪಡೆಯಲು ಗಳಿಸಬೇಕಾದ ಒಟ್ಟು ಕಡ್ಡಾಯ ಕ್ರೆಡಿಟ್ಗಳ ಕನಿಷ್ಠ ಶೇ.5ಕ್ಕೆ ಸಮನಾದ ಐಕೆಎಸ್ನಲ್ಲಿ ಕ್ರೆಡಿಟ್ ಕೋರ್ಸ್ಗಳನ್ನು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ಕರಡು ಮಾರ್ಗಸೂಚಿಗಳು ಪ್ರಸ್ತಾವಿಸಿವೆ.

                  ಸರಳವಾಗಿ ಹೇಳಬೇಕೆಂದರೆ ಗಣಿತವನ್ನು ಪ್ರಮುಖ ವಿಷಯವನ್ನಾಗಿ ಬಿಎಸ್ಸಿ ಮಾಡುತ್ತಿರುವ ವಿದ್ಯಾರ್ಥಿಯು ವೇದಗಳಲ್ಲಿಯ ಸಂಖ್ಯೆಗಳು, ಭಿನ್ನರಾಶಿಗಳು ಮತ್ತು ರೇಖಾಗಣಿತದಂತಹ ಗಣಿತ ಕುರಿತ ಐಕೆಎಸ್ ಕೋರ್ಸ್ಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ಅದೇ ರೀತಿ ಎಂಎ ಇತಿಹಾಸ ವಿದ್ಯಾರ್ಥಿಯು ಆ ಕ್ಷೇತ್ರಕ್ಕೆ ಸಂಬಂಧಿಸಿದ ಐಕೆಎಸ್ ಕೋರ್ಸ್ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

               ಆಧುನಿಕ ವೈದ್ಯಶಾಸ್ತ್ರದ ವಿದ್ಯಾರ್ಥಿಗಳಿಗೆ ಮೊದಲ ವರ್ಷದಲ್ಲಿ 'ಭಾರತೀಯ ವೈದ್ಯ ವ್ಯವಸ್ಥೆ 'ಕುರಿತು ಕ್ರೆಡಿಟ್ ಕೋರ್ಸ್ ಅನ್ನು ಹಾಗೂ ಆಯುರ್ವೇದ, ಸಿದ್ಧ, ಯೋಗ, ನಿಸರ್ಗಚಿಕಿತ್ಸೆ, ಯುನಾನಿ ಅಥವಾ ಹೋಮಿಯೊಪತಿಯ 'ಥಿಯರಿ ಮತ್ತು ಪ್ರಾಕ್ಟೀಸ್' ಕುರಿತು ಎರಡು ಸೆಮೆಸ್ಟರ್ ಕ್ರೆಡಿಟ್ ಕೋರ್ಸ್ಗಳನ್ನು ಯುಜಿಸಿ ಪ್ರಸ್ತಾವಿಸಿದೆ.
ಕರಡನ್ನು ಸಾರ್ವಜನಿಕಗೊಳಿಸಲಾಗಿದ್ದು, ಎ.30ರವರೆಗೆ ಪ್ರತಿಕ್ರಿಯೆಗಳನ್ನು ಕೋರಲಾಗಿದೆ. ಯುಜಿಸಿಯು ಸಲಹೆಗಳಿಗಾಗಿ ವಿವಿಗಳು ಮತ್ತು ಕಾಲೇಜುಗಳಿಗೂ ಈ ಮಾರ್ಗಸೂಚಿಗಳನ್ನು ಕಳುಹಿಸಿದೆ.

               ಕರಡು ಮಾರ್ಗಸೂಚಿಗಳಲ್ಲಿ ಸೂಚಿಸಲಾಗಿರುವ ಇತರ ಕೋರ್ಸ್ ಗಳಲ್ಲಿ ಭಾರತದ ಭವ್ಯ ಭೌಗೋಳಿಕ ಪ್ರತ್ಯೇಕತೆ ಮತ್ತು ಭಾರತೀಯ ಸಂಸ್ಕೃತಿಯ ಅನನ್ಯತೆ; ರಾಮಾಯಣ ಮತ್ತು ಮಹಾಭಾರತ ಹಾಗೂ ಅವುಗಳ ಪ್ರಮುಖ ಪ್ರಾದೇಶಿಕ ಆವೃತ್ತಿಗಳು; ಪುರಾಣಗಳು; ವೇದಕಾಲದಿಂದ ವಿವಿಧ ಧರ್ಮಗಳ ಭಕ್ತಿ ಸಂಪ್ರದಾಯಗಳವರೆಗಿನ, ಜೈನ ಮತ್ತು ಬೌದ್ಧ ಸೇರಿದಂತೆ ಭಾರತೀಯ ಧಾರ್ಮಿಕ ಸಂಪ್ರದಾಯದ ಬುನಾದಿ ಗ್ರಂಥಗಳು ಸೇರಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries