ಬದಿಯಡ್ಕ: ಕಾರ್ಮಾರು ಶ್ರೀ ಮಹಾ ವಿಷ್ಣು ಕ್ಷೇತ್ರದ ಜೀರ್ಣೋದ್ಧಾರದ ಅಂಗವಾಗಿ ಉಪದೇವತೆಗಳ ಸನ್ನಿಧಿಗೆ ಶಿಲಾನ್ಯಾಸ ಕಾರ್ಯಕ್ರಮ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಬಲಿವಾಡು ಕೂಟದೊಂದಿಗೆ ಮೇ.24 ಬುಧವಾರ ನೆರವೇರಲಿದೆ. ಅಂದು ಬೆಳಗ್ಗೆ 8.05 ರಿಂದ 9:30ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಮುಂಬೈಯ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರು ಶಿಲಾನ್ಯಾಸಗೈಯ್ಯಲಿರುವರು. ಜೀರ್ಣೋದ್ಧಾರ ಸಮಿತಿ ರಕ್ಷಾಧಿಕಾರಿ ಗೋಪಾಲಕೃಷ್ಣ ಪೈ ಬದಿಯಡ್ಕ ಇವರು ಅಧ್ಯಕ್ಷತೆ ವಹಿಸಲಿರುವರು. ಸಂಸ್ಕೃತ ಭಾರತಿಯ ಜಿಲ್ಲಾ ಸಂಯೋಜಕ ಮಂಜುನಾಥ ಉಡುಪ ಕುಂಟಾರು, ನಿವೃತ್ತ ಜಿಲ್ಲಾ ಲೇಬರ್ ಆಫೀಸರ್ ಕೇಶವ ನಾಯ್ಕ, ಲೀಗಲ್ ಮೆಟ್ರೋಲಜಿ ಇನ್ಸ್ಪೆಕ್ಟರ್ ಶಶಿಕಲಾ ಸುಬ್ರಮಣ್ಯ, ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ನಾರಾಯಣ, ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ಗುರುಸ್ವಾಮಿ ಶ್ರೀ ಕುಂಞÂಕಣ್ಣ ಮಣಿಯಾಣಿ, ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ಗುರುಸ್ವಾಮಿ ಕುಂಞಪ್ಪು ನಾಯಕ ಮೊದಲಾದವರು ಉಪಸ್ಥಿತರಿರುವರು.