HEALTH TIPS

27 ವರ್ಷ ಒಂದೇ ಒಂದು ರಜೆ ಹಾಕದೇ ಕೆಲಸ ಮಾಡಿದ ಉದ್ಯೋಗಿ! ಬಹುಮಾನವಾಗಿ ಬಂತು ಕೋಟಿ-ಕೋಟಿ ಹಣ!

 

           ತಮ್ಮ 27 ವರ್ಷಗಳ ವೃತ್ತಿ ಜೀವನದಲ್ಲಿ ಒಂದು ದಿನವೂ ರಜೆ ಹಾಕದೆ ಕೆಲಸ ಮಾಡಿ ನಿವೃತ್ತರಾದ ವ್ಯಕ್ತಿಗೆ ಬರೋಬ್ಬರಿ 3.26 ಕೋಟಿ ಬಹುಮಾನ ಸಿಕ್ಕಿದೆ.

           ಯಾವುದೇ ಕೆಲಸವನ್ನು ಬದ್ಧತೆ ಮತ್ತು ಶಿಸ್ತಿನಿಂದ ಮಾಡುವವರು ಈ ಜಗತ್ತಿನಲ್ಲಿ ಬಹಳ ಕಡಿಮೆ ಜನರು ಮತ್ತು ಉದ್ಯೋಗಿಗಳು ಸಿಗಬಹುದು. ತಮಗೆ ಸಿಗುವ ಅವಕಾಶವನ್ನು ಬಳಸಿಕೊಳ್ಳಲು ಕೆಲವರು ಉದ್ಯೋಗಗಳನ್ನು ಮಾಡುತ್ತಾರೆ. ಇತರರು ಉದ್ಯೋಗ, ಜೀವನ ಮತ್ತು ತಮ್ಮ ಜವಾಬ್ದಾರಿಗಳನ್ನು ಪೂರೈಸಲು ಕೆಲಸ ಮಾಡುತ್ತಾರೆ.
          ಕೆವಿನ್ ಫೋರ್ಡ್ ಎಂಬ ಈ 54 ವರ್ಷದ ವ್ಯಕ್ತಿ, ಕಳೆದ 27 ವರ್ಷಗಳಿಂದ ಬರ್ಗರ್‌ಕಿಂಗ್ ಫುಡ್​ ಚೈನ್ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆವಿನ್ ಫೋರ್ಡ್ ಅಗತ್ಯತೆಗಾಗಿ, ಹಣಕ್ಕಾಗಿ ಮಾತ್ರ ಕೆಲಸ ಮಾಡುವುದಲ್ಲ, ಶಿಸ್ತನ್ನು ಕಾಪಾಡುವುದು ಒಂದು ಜವಾಬ್ದಾರಿ ಎಂಬುದನ್ನು ಸಾಬೀತುಪಡಿಸಿದ್ದಾರೆ. 
             
         ಕೆವಿನ್ ಫೋರ್ಟ್ ಬಗ್ಗೆ ಹೆಮ್ಮೆ ಪಡಬೇಕಾದ ಸಂಗತಿಯೆಂದರೆ, ಅವರ 27 ವರ್ಷಗಳ ಕೆಲಸದ ಜೀವನದಲ್ಲಿ ಅವರು ಒಂದು ದಿನವೂ ಕೆಲಸಕ್ಕೆ ಗೈರಾಗಿಲ್ಲ. ಅದೇನೆಂದರೆ 27 ವರ್ಷಗಳ ಕಾಲ ರಜೆ ತೆಗೆದುಕೊಳ್ಳದೆ ಕೆಲಸ ಮಾಡಿ ನಿವೃತ್ತರಾದರು. ತಮ್ಮ 25ನೇ ವರ್ಷದ ವಿವಾಹ ವಾರ್ಷಿಕೋತ್ಸವದ ದಿನದಂದೂ ಅವರೂ ರಜೆ ಹಾಕದೇ ಕೆಲಸ ಮಾಡಿದ್ದರು. 
             ವಿಚಿತ್ರವೆಂದರೆ ಫೋರ್ಡ್​ 27 ವರ್ಷ ರಜೆ ತೆಗೆದುಕೊಳ್ಳದೆ ಕೆಲಸ ಮಾಡಿದ್ದಕ್ಕೆ ಅವರಿಗೆ ಸಿಕ್ಕಂತಹ ಬಹುಮಾನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋದ ಪ್ರಕಾರ ಅವರಿಗೆ ಸಿಕ್ಕಿದ್ದ ಗಿಫ್ಟ್​ ಬಾಕ್ಸ್​ನಲ್ಲಿ ಫಿಲ್ಮ್​ ಟಿಕೆಟ್​, ಒಂದಷ್ಟು ತಿಂಡಿಗಳನ್ನು ಹೊರತುಪಡಿಸಿ ಏನನ್ನೂ ನೀಡಿರಲಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನೂ ವೀಕ್ಷಿಸಿದ ನೆಟ್ಟಿಗರು ಫೋರ್ಡ್​ ನಿಯತ್ತಿನ ಕೆಲಸಕ್ಕೆ ಇದು ಸರಿಯಾದ ಉಡುಗೊರೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
        ಈ ವಿಡಿಯೋ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದ ಫೋರ್ಡ್ ಮಗಳು, GoFundMe ಅಭಿಯಾನ ಶುರು ಮಾಡಿದ್ದರು. ಇದರಲ್ಲಿ ಫೋರ್ಡ್​ ಬದ್ಧತೆಯನ್ನು ಶ್ಲಾಘಿಸಿದ್ದ ವಿಶ್ವದಾದ್ಯಂತ ಜನರು ಫೋರ್ಡ್​ ಕೆಲಸವನ್ನು ಮೆಚ್ಚಿ ತಮ್ಮ ಕೈಲಾದಷ್ಟು ಹಣವನ್ನು ದೇಣಿಗೆಯಾಗಿ ನೀಡಿದ್ದರು. ಇದೀಗ ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ 400,000 ಡಾಲರ್ ಅಂದರೆ ಭಾರತೀಯ ಕರೆನ್ಸಿಯಲ್ಲಿ ಬರೋಬ್ಬರಿ 3.26 ಕೋಟಿ ಫೋರ್ಡ್​ ಖಾತೆ ಸೇರಿದೆ.
           ಕೆವಿನ್ ಫೋರ್ಡ್ ಅವರ ಕೆಲಸದ ಮೇಲಿನ ನಿಷ್ಠೆಯ ಹೃದಯಸ್ಪರ್ಶಿ ಕಥೆಯು ಡೇವಿಡ್ ಸ್ಪೇಡ್ ಅವರಂತಹ ಪ್ರಸಿದ್ಧ ವ್ಯಕ್ತಿಗಳು ಸೇರಿದಂತೆ ಅನೇಕರ ಗಮನವನ್ನು ಸೆಳೆದಿತ್ತು. ಅವರೂ ಕೂಡ ದೇಣಿಗೆಯಲ್ಲಿ ಕೈ ಜೋಡಿಸಿದ್ದಾರೆ. ಟೆಕ್ಸಾಸ್‌ನಲ್ಲಿರುವ ಫೋರ್ಡ್​ ಅವರು ತಮ್ಮ ಮೊಮ್ಮಕ್ಕಳನ್ನು ಭೇಟಿ ಮಾಡಲು ಅಗತ್ಯವಿದ್ದ ಹಣವನ್ನು ಸಂಗ್ರಹಿಸುವ ಗುರಿಯೊಂದಿಗೆ ಫೋರ್ಡ್ ಮಗಳು ನಿಧಿಸಂಗ್ರಹ ಅಭಿಯಾನವನ್ನು ಪ್ರಾರಂಭಿಸಿದರು ಎಂದು ವರದಿಯಾಗಿದೆ.
              ಫೋರ್ಡ್​ ಅವರ ಶ್ರಮ, ಬದ್ಧತೆ ಹಾಗೂ ನಿಯತ್ತನ್ನು ಅವರ ಕಂಪನಿ ಗುರುತಿಸಿ ಸೂಕ್ತ ಗೌರವ ನೀಡದಿದ್ದರೂ ಪ್ರಪಂಚದಾದ್ಯಂತ ಜನರು ಅವರಿಗೆ GoFundMe ಅಭಿಯಾನದಲ್ಲಿ ದಾರಾಳತನ ತೋರಿರುವುದಕ್ಕೆ ಫೋರ್ಡ್​ ಧನ್ಯವಾದ ಅರ್ಪಿಸಿದ್ದಾರೆ.
             ಕೆವಿನ್ ಫೋರ್ಡ್ ಅವರ 27 ವರ್ಷಗಳ ಕಠಿಣ ಪರಿಶ್ರಮವು ಅವರ ಕಂಪನಿಯವರಿಂದ ಗುರುತಿಸಲ್ಪಡದೆ ಹೋಗಿರಬಹುದು, ಆದರೆ ಅಪರಿಚಿತರ ಬೆಂಬಲ ಮತ್ತು ಔದಾರ್ಯವು ಒಳ್ಳೆಯ ಕಾರ್ಯಕ್ಕೆ ಎಂದಿದಿಗೂ ಉತ್ತಮ ಫಲ ಸಿಗುತ್ತದೆ ಎಂಬುದನ್ನು ಸಾಬೀತು ಮಾಡಿದೆ.

   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries