HEALTH TIPS

ಕಳೆದೊಂದು ವರ್ಷದಲ್ಲಿ 29,237 ಮಂದಿಗೆ ಉದ್ಯೋಗ: ಪಂಜಾಬ್ ಸಿಎಂ

              ಚಂಡೀಗಡ: ಕಳೆದೊಂದು ವರ್ಷದಲ್ಲಿ ಎಎಪಿ ಸರ್ಕಾರವು ರಾಜ್ಯದಲ್ಲಿ 29,237 ಮಂದಿಗೆ ಉದ್ಯೋಗವನ್ನು ನೀಡಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ ತಿಳಿಸಿದ್ದಾರೆ.

             ಮೆರಿಟ್ ಆಧಾರದಲ್ಲೇ ಈ ಎಲ್ಲ ಉದ್ಯೋಗಗಳಿಗೆ ನೇಮಕಾತಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

               ಪಂಜಾಬ್ ಪೊಲೀಸ್‌ನ ವಿವಿಧ ತನಿಖಾ ದಳದ 144 ನಾಗರಿಕ ಸಹಾಯಕ ಸಿಬ್ಬಂದಿಗೆ ನೇಮಕಾತಿ ಪತ್ರ ವಿತರಿಸಿದ ಬಳಿಕ ಅವರು ಈ ಕುರಿತು ವಿವರಿಸಿದ್ದಾರೆ.

               ಕಳೆದೊಂದು ವರ್ಷದಲ್ಲಿ ಪಂಜಾಬ್ ಪೊಲೀಸ್ ಅನೇಕ ಕಾರ್ಯಾಚರಣೆಗಳನ್ನು ನಡೆಸಿದೆ. ದೇಶದಲ್ಲೇ ಪಂಜಾಬ್ ಪೊಲೀಸ್ ನಂ.1 ಆಗಿ ಪರಿಗಣಿಸಿರುವುದು ಹೆಮ್ಮೆಯ ವಿಚಾರ ಎಂದು ಅವರು ಹೇಳಿದರು.

                 ರಾಜ್ಯದಲ್ಲಿ ಮುಂದಿನ ನಾಲ್ಕು ವರ್ಷಗಳವರೆಗೆ ವರ್ಷಂಪ್ರತಿ 1,800 ಕಾನ್‌ಸ್ಟೆಬಲ್ ಮತ್ತು 300 ಸಬ್ ಇನ್ಸ್‌ಪೆಕ್ಟರ್‌ಗಳನ್ನು ನೇಮಕ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries