HEALTH TIPS

ಗೋವಾ-ದೆಹಲಿ ನಡುವಿನ ಏರ್​ ಇಂಡಿಯಾ ವಿಮಾನ ಸಿಬ್ಬಂದಿ ಮೇಲೆ ಪ್ರಯಾಣಿಕನಿಂದ ಹಲ್ಲೆ

              ವದೆಹಲಿಪ್ರಯಾಣಿಕ ಓರ್ವ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಘಟನೆ ಗೋವಾ-ದೆಹಲಿ ನಡುವಿನ ಏರ್​ ಇಂಡಿಯಾ ವಿಮಾನದಲ್ಲಿ ನಡೆದಿದೆ.

              ಏರ್​ ಇಂಡಿಯಾ ವಿಮಾನ ಸಂಖ್ಯೆ AI882ರಲ್ಲಿ ಘಟನೆ ನಡೆದಿದ್ದು ಪ್ರಕರಣ ಸಂಬಂಧ ಆರೋಪಿಯನ್ನು ದೆಹಲಿಯಲ್ಲಿ ಪೊಲೀಸ್​ ವಶಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ಧಾರೆ.

                        ವರ್ತನೆ ಪ್ರಶ್ನಿಸಿದ್ದಕ್ಕೆ ಹಲ್ಲೆ

          ಈ ಕುರಿತು ಪ್ರತಿಕ್ರಿಯಿಸಿರುವ ಏರ್​ ಇಂಡಿಯಾ ವಕ್ತಾರರು AI882ನಲ್ಲಿ ಮೇ 29ರಂದು ಪ್ರಯಾಣಿಕನೊಬ್ಬನು ಮೊದಲಿಗೆ ಅನುಚಿತವಾಗಿ ವರ್ತಿಸಲು ಶುರು ಮಾಡಿದ್ದಾನೆ. ಇದನ್ನು ಪ್ರಶ್ನಿಸಿದ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಳಿಕ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.

                 ದೆಹಲಿಯ್ಲಲಿ ವಿಮಾನ ಲ್ಯಾಂಡ್​ ಆದ ನಂತರವೂ ಪ್ರಯಾಣಿಕ ಅನುಚಿತವಾಗಿ ವರ್ತಿಸುವುದನ್ನು ಮುಂದುವರೆಸಿದ. ಈ ಬಗ್ಗೆ ನಾವು ವಿಮಾನ ನಿಲ್ದಾಣದ ನಿಯಂತ್ರಕರಿಗೆ ದೂರು ನೀಡಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದೇವೆ ಎಂದು ಏರ್​ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries