HEALTH TIPS

ಕರಾಳ ಘಟನೆ 'ಗೋಧ್ರಾ' ಚಿತ್ರದ ಟೀಸರ್ ರಿಲೀಸ್

              ದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಘನಘೋರ ಗೋಧ್ರಾ ಘಟನೆಯು 2002ರ ಫೆಬ್ರವರಿ 27ರಂದು ಗುಜರಾತ್‌ನಲ್ಲಿ ನಡೆದಿತ್ತು. ಸದ್ಯ, ಈ ಕುರಿತಾದ ಸಿನಿಮಾವೊಂದು ಬೆಳ್ಳಿತೆರೆಗೆ ಬರಲು ಸಿದ್ಧವಾಗಿದ್ದು, ಆಕಸ್ಮಿಕವೋ ಅಥವಾ ದುರುದ್ಧೇಶವೋ ಗೋಧ್ರಾ(accident or conspiracy godhra) ಎಂಬ ಚಿತ್ರದ ಟೀಸರ್​ ಬಿಡುಗಡೆ ಆಗಿದೆ.

               ಸದ್ಯ ಬಿಡುಗಡೆಯಾಗಿರುವ ಟೀಸರ್‌ನಲ್ಲಿ, ಗೋಧ್ರಾ ದುರಂತದ ಚಿತ್ರಣವನ್ನು ನೋಡಬಹುದಾಗಿದೆ. ಇದು ಸತ್ಯ ಘಟನೆಗಳನ್ನು ಆಧರಿಸಿದ್ದು, ಸಾಬರಮತಿ ಎಕ್ಸ್‌ಪ್ರೆಸ್ ಮೇಲಿನ ದಾಳಿಯನ್ನು ಘೋರ ಎಂದು ಟೀಸರ್​ನಲ್ಲಿ ಕರೆದಿದೆ. ಅನೇಕ ನೆಟ್ಟಿಗರು ಇದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದು, ಈ ಘಟನೆಯ ಕುರಿತು ಇಂದಿಗೂ ಆಗಾಗ ವಿವಾದ ಭುಗಿಲೇಳುತ್ತಲೇ ಇರುತ್ತವೆ.

                   ಅಂದು ಗೋಧ್ರಾದಲ್ಲಿ ನಡೆದ ಈ ಘಟನೆ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಎಂಬುದನ್ನು ಚಿತ್ರದಲ್ಲಿ ಸೆರೆ ಹಿಡಿಯಲು ಯತ್ನಿಸಲಾಗಿದೆ. ಚಿತ್ರವನ್ನು ಎಂ.ಕೆ.ಶಿವಾಕ್ಷ್ ನಿರ್ದೇಶಿಸುತ್ತಿದ್ದು, ಬಿ.ಜೆ. ಪುರೋಹಿತ್ ಹಾಗೂ ರಾಮ್​ ಕುಮಾರ್​ ಪಾಲ್​ ಎಂಬುವರು ನಿರ್ಮಿಸುತ್ತಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries