HEALTH TIPS

ಶೀಘ್ರದಲ್ಲೇ ವಾಟ್ಸ್​ಆಯಪ್​ನಲ್ಲಿ ಬರಲಿವೆ ಹಲವು ಹೊಸ ವೈಶಿಷ್ಟ್ಯಗಳು

              ದೆಹಲಿ: ಬಳಕೆದಾರರ ಉತ್ತಮ ಅನುಭವಕ್ಕಾಗಿ ವಾಟ್ಸ್​ಆಯಪ್​ ಹೊಸ ಫೀಚರ್​​​ಗಳನ್ನು ಪರಿಚಯಿಸುತ್ತಲೇ ಇದೆ. ಹಲವು ದಿನಗಳ ಹಿಂದೆ ಕಳುಹಿಸಿದ ಮೇಸೆಜ್​ನ್ನು 15 ನಿಮಿಷದೊಳಗಾಗಿ ತಿದ್ದುಪಡಿ ಮಾಡುವ ಫೀಚರ್​​ನ್ನು ನೀಡಿತ್ತು. ತನ್ನ ಬಳಕೆದಾರರಿಗೆ ಯಾವಾಗಲೂ ಹಲವು ಹೊಸ ಫೀಚರ್​ಗಳನ್ನು ನೀಡುವ ವಾಟ್ಸ್​ಆಯಪ್ ಮತ್ತಷ್ಟು ಫೀಚರ್​ಗಳನ್ನು ನೀಡಲು ಮುಂದಾಗಿದೆ.

              ಪಾಸ್‌ವರ್ಡ್ ರಿಮೈಂಡರ್ ವೈಶಿಷ್ಟ್ಯ: ಬಳಕೆದಾರರಿಗೆ ಪಾಸ್‌ವರ್ಡ್ ರಿಮೈಂಡರ್ ಎಂಬ ಫೀಚರ್​​ ನೀಡಲು ವಾಟ್ಸ್​ಆಯಪ್ ಯೋಚಿಸುತ್ತಿದೆ. ವೈಯಕ್ತಿಕ ಪಾಸ್‌ವರ್ಡ್ ಅಥವಾ 64-ಅಂಕಿಯ ಎನ್‌ಕ್ರಿಪ್ಟನ್ ಕೀಯನ್ನು ಆರಿಸುವ ಮೂಲಕ, ಬಳಕೆದಾರರು ತಮ್ಮ ಬ್ಯಾಕ್‌ಅಪ್‌ಗಳನ್ನು ಎಂಡ್-ಟು-ಎಂಡ್ ಎನ್‌ಕ್ರಿನ್‌ನೊಂದಿಗೆ ಸುರಕ್ಷಿತಗೊಳಿಸಬಹುದಾಗಿದೆ.

                 ಸ್ಕ್ರೀನ್​ ಶೇರಿಂಗ್​: ವಾಟ್ಸಾಪ್ ಹೊಸ ಸ್ಕ್ರೀನ್ ಶೇರಿಂಗ್ ಫೀಚರ್​ನ್ನು ಪರಿಚಯಿಸುತ್ತಿದ್ದು, ವೀಡಿಯೊ ಕರೆಗಳ ಸಮಯದಲ್ಲಿ ಬಳಕೆದಾರರು ತಮ್ಮ ಪರದೆಯನ್ನು ಹಂಚಿಕೊಳ್ಳಲು ಇದು ಅನುವು ಮಾಡಿಕೊಡುತ್ತದೆ.

                ಮರುವಿನ್ಯಾಸಗೊಳಿಸಲಾದ ಸೆಟ್ಟಿಂಗ್‌ ಪುಟ: ಮೆಟಾ-ಮಾಲೀಕತ್ವದ ವಾಟ್ಸ್​ಆಯಪ್, ಆಯಂಡ್ರಾಯ್ಡ್​ ಬಳಕೆದಾರರಿಗೆ ಹೊಸ ಸೆಟ್ಟಿಂಗ್‌ಗಳ ಇಂಟರ್​ಫೇಸ್​ನ್ನು ಅಭಿವೃದ್ಧಿಪಡಿಸುತ್ತಿದ್ದು ಈ ವೈಶಿಷ್ಟ್ಯವು ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಇದು ಪ್ರೊಫೈಲ್, ಗೌಪ್ಯತೆ(privacy) ಮತ್ತು ಸಂಪರ್ಕಗಳು(contacts) ಎಂಬ ಮೂರು ಹೊಸ ಪ್ರೊಫೈಲ್ ಶಾರ್ಟ್‌ಕಟ್‌ಗಳನ್ನು ಪರಿಚಯಿಸುತ್ತದೆ ಎಂದು ಹೇಳಲಾಗಿದೆ.

                     ವಾಟ್ಸಾ​ಆಯಪ್ ಚಾನೆಲ್: ವಾಟ್ಸಾ​ಆಯಪ್ ಸ್ಟೇಟಸ್ ಟ್ಯಾಬ್​ನ್ನು ಚಾನೆಲ್‌ಗಳ 'ಅಪ್‌ಡೇಟ್‌ಗಳು' ಎಂದು ಮರುಹೆಸರಿಸಲು ಯೋಜಿಸಿದೆ. ಈ ವಿಭಾಗದಲ್ಲಿ ವಾಟ್ಸಾ​ಆಯಪ್ ಚಾನೆಲ್‌ಗಳನ್ನು ಪಟ್ಟಿ ಮಾಡಲಾಗುತ್ತದೆ. ಚಾನೆಲ್‌ಗೆ ಸೇರುವ ಫೋನ್ ಸಂಖ್ಯೆಗಳು ಮತ್ತು ಬಳಕೆದಾರರ ಮಾಹಿತಿಯನ್ನು ಯಾವಾಗಲೂ ಮರೆಮಾಡಲಾಗುವ ಫೀಚರ್​ನ್ನು ಒದಗಿಸಲು ಯೋಚಿಸುತ್ತಿದೆ.

ಯೂಸರ್ ನೇಮ್ ವೈಶಿಷ್ಟ್ಯ: ವಾಟ್ಸ್​ಆಯಪ್ ಬಳಕೆದಾರರು ತಮ್ಮ ಖಾತೆಗಳಿಗೆ ವಿಶಿಷ್ಟವಾದ ಯೂಸರ್ ನೇಮ್ ಆಯ್ಕೆ ಮಾಡಲು ಅನುವು ಮಾಡಿಕೊಡುವ ಯೂಸರ್ ನೇಮ್ ಫೀಚರ್​ನ್ನು ಒದಗಿಸಲು ಮುಂದಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries