HEALTH TIPS

ಲೈಕ್ಸ್​, ವ್ಯೂವ್ಸ್​​ಗಾಗಿ ಟ್ರಾಫಿಕ್​ ಸಿಗ್ನಲ್​ನಲ್ಲಿ ಸ್ನಾನ ಮಾಡಿದ ಯುವಕ!

                    ಚೆನ್ನೈಇತ್ತೀಚಿನ ದಿನಗಳಲ್ಲಿ ಜನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಗೆ​ ಆಗುವ ಬಯಕೆಯಲ್ಲಿ ವಿವಿಧ ರೀತಿಯ ಕಸರತ್ತಿಗೆ ಮೊರೆ ಹೋಗುತ್ತಿದ್ದು ಸಾರ್ವಜನಿಕೆ ಸ್ಥಳಗಳಲ್ಲಿ ಇಲ್ಲಸಲ್ಲದ ಕೆಲಸ ಮಾಡುವ ಮೂಲಕ ಸುದ್ದಿಯಾಗುತ್ತಾರೆ.

                   ಸಾಮಾಜಿಕ ಜಾಲತಾಣದಲ್ಲಿ ತನ್ನ ಪೋಸ್ಟ್​ಗಳಿಗೆ ಹೆಚ್ಚಿನ ಲೈಕ್​ ಹಾಗೂ ವ್ಯೂವ್ಸ್ ಬರಲೆಂದು​​ ಗೀಳಿಗೆ ಬಿದ್ದ ಯುವಕ ಪೊಲೀಸರಿಗೆ 3,500 ಸಾವಿರ ರೂಪಾಯಿ ದಂಡ ತೆತ್ತಿರುವ ಘಟನೆ ತಮಿಳುನಾಡಿದ ಈರೋಡ್​ನಲ್ಲಿ ನಡೆದಿದೆ.

                                              ಟ್ರಾಫಿಕ್​ ಜಾಮ್​ನಲ್ಲಿ ಸ್ನಾನ

              ತಮಿಳುನಾಡಿನಲ್ಲಿ ಕಳೆದ ಕೆಲ ದಿನಗಳಿಂದ ಬಿಸಿಲಿನ ಬೇಗೆ ಹೆಚ್ಚಾಗಿದ್ದು ಈ ವೇಳೆ ಯುವನೋರ್ವ ಟ್ರಾಫಿಕ್​ ಸಿಗ್ನಲ್​ನಲ್ಲಿ ನಿಂತಿರುವ ವೇಳೆ ದ್ವಿಚಕ್ರ ವಾಹನದ ಮೇಲೆ ಸ್ನಾನ ಮಾಡಿದ್ದಾನೆ.

                   ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿ ಒಬ್ಬರು ಇನ್ಸ್​ಟಾಗ್ರಾಂನಲ್ಲಿ ತನ್ನ ರೀಲ್ಸ್​ಗೆ ಹೆಚ್ಚಿನ ಲೈಕ್ಸ್​ ಹಾಗೂ ವೀವ್ಸ್​​ಗಳು ಬರಲಿ ಎಂಬ ಕಾರಣಕ್ಕೆ ವೆಲ್ಲೋಡ್​ನ ಪಾರ್ತಿಬನ್ ಎಂಬ ಯುವಕ ಸಿಗ್ನಲ್​ನಲ್ಲಿ ನಿಂತಿರುವ ವೇಳೆ ಸ್ನಾನ ಮಾಡುವ ವಿಡಿಯೋವನ್ನು ಮಾಡಿದ್ದಾನೆ.

                                        ವಿಡಿಯೋದಲ್ಲಿ ಹುಚ್ಚಾಟ

               ಈತ ತನ್ನ ಇನ್ಸ್​​ಟಾಗ್ರಾಂನಲ್ಲಿ ರಸ್ತೆಯಲ್ಲಿ ಆಮ್ಲೆಟ್​ ತಯಾರಿಸುವುದು, ಬೇಯಿಸದ ಮೀನು ತಿನ್ನುವುದು, ನೀರಿನಲ್ಲಿ ಮೊಟ್ಟೆಯನ್ನು ಕಳಿಸಿಕೊಂಡು ಕುಡಿಯುವುದು, ಟ್ರಾಫಿಕ್​ ಜಾಮ್ನಲ್ಲಿ ಬಿರಿಯಾನಿ ಸೇವಿಸುವುದು, ರಾತ್ರಿ ಹೊತ್ತು ಬಾವಿಯಲ್ಲಿ ಸ್ನಾನ ಮಾಡುವ ವಿಡಿಯೋವನ್ನು ಪೋಸ್ಟ್​ ಮಾಡಿದ್ದಾನೆ.

                  ಟ್ರಾಫಿಕ್​ ಸಿಗ್ನಲ್​ನಲ್ಲಿ ಸ್ನಾನ ಮಾಡುವುದಾಗಿ ತನ್ನ ಸ್ನೇಹಿತರ ಬಳಿ 10 ರೂಪಾಯಿ ಬೆಟ್ಟಿಂಗ್​ ಕಟ್ಟಿದ್ದ. ಅದರಂತೆ ಪಂದ್ಯದಲ್ಲಿ ಗೆದ್ದಿದ್ದಾನೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಆತನನ್ನು ಈರೋಡ್​ ಪೊಲೀಸ್​ ಠಾಣೆಗೆ ಕರೆಸಿ ವಾಹನಗಳ ಸಂಚಾರಕ್ಕೆ ಅಡ್ಡಿ ಪಡಿಸಿದ್ದು ಮತ್ತು ಹೆಲ್ಮೆಟ್​ ಧರಿಸದೆ ಸವಾರಿ ಮಾಡಿದ್ದಕ್ಕೆ 3,500 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries