HEALTH TIPS

ಪೋಲೀಸರು ನೋಡನೋಡುತ್ತಿದ್ದಂತೆ ವಂದನಾಗೆ ಆರು ಬಾರಿ ಇರಿದ ಕಿರಾತಕ: ಆರೋಪಿ ಸಂದೀಪ್ ಶಾಲಾ ಶಿಕ್ಷಕ!

               ಕೊಲ್ಲಂ: ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಹತ್ಯೆಗೀಡಾದ ವೈದ್ಯೆ ವಂದನಾ ಅವರಿಗೆ ಆರು ಬಾರಿ ಇರಿದಿರುವುದಾಗಿ ವೈದ್ಯರು ತಿಳಿಸಿದ್ದಾರೆ.

         ಪುಯಪಿಲ್ಲಿಯಲ್ಲಿ ಥಳಿತ ಪ್ರಕರಣದಲ್ಲಿ ಪೆÇಲೀಸರು ವಶಕ್ಕೆ ಪಡೆದ ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ದು ಗಾಯಕ್ಕೆ ಹೊಲಿಗೆ ಹಾಕುತ್ತಿದ್ದಾಗ ದಾಳಿ ನಡೆದಿದೆ.

              ಕೊಟ್ಟಾಯಂ ಮೂಲದ ವಂದನಾ ದಾಸ್ ಕೊಲೆಯಾದವರು. ಪುಯಪಲ್ಲಿ ಚೆರುಕಾರಕೋಣಂ ನಿವಾಸಿ ಸಂದೀಪ್ ಹತ್ಯೆಗೈದ ಅಪರಾಧಿ. ಚಿಕಿತ್ಸೆ ವೇಳೆ ಆರೋಪಿ ಕತ್ತರಿ ತೆಗೆದುಕೊಂಡು ವೈದ್ಯರ ಕುತ್ತಿಗೆ, ತಲೆ ಮತ್ತು ಮುಖಕ್ಕೆ ಇರಿದಿದ್ದಾನೆ. ಬಳಿಕ ಇತರ ನಾಲ್ವರ ಮೇಲೂ ಹಲ್ಲೆ ನಡೆದಿದೆ. ಆರೋಪಿ ಯಾವುದೇ ಪ್ರಚೋದನೆ ಇಲ್ಲದೆ ಹಠಾತ್ ದಾಳಿ ನಡೆಸಿದ್ದಾನೆ ಎಂದು ಪೆÇಲೀಸರು ತಿಳಿಸಿದ್ದಾರೆ.

             ಸಂದೀಪ್ ಕೊಲ್ಲಂ ನೆಡುಂಬನ ಯುಪಿ ಶಾಲೆಯಲ್ಲಿ ಶಿಕ್ಷಕ. ವ್ಯಸನಮುಕ್ತ ಕೇಂದ್ರದಿಂದ ಕರೆತರಲಾಗಿತ್ತು. ಸಂದೀಪ್ ಮನೆ ಬಳಿಯ ಜನರೊಂದಿಗೆ ಹೊಡೆದಾಟದಲ್ಲಿ ಗಾಯಗೊಂಡಿದ್ದ.  ನಂತರ ಸಂದೀಪನನ್ನು ಕೋಟ್ಟಾÀಕ್ಕರ ಆಸ್ಪತ್ರೆಗೆ ಕರೆದೊಯ್ದು ಗಾಯಕ್ಕೆ ಹೊಲಿಗೆ ಹಾಕುತ್ತಿದ್ದಾಗ ಸಂದೀಪ್ ಅಲ್ಲೇ ಇದ್ದ ಕತ್ತರಿ ತೆಗೆದುಕೊಂಡು ವೈದ್ಯರ ಕುತ್ತಿಗೆ ಸಹಿತ ಇತರೆಡೆ ಮನಬಂದಂತೆ ಗೆ ಇರಿದಿದ್ದಾನೆ. ಈ ವೇಳೆ ಅಧಿಕ ರಕ್ತಸ್ರಾವಕ್ಕೊಳಗಾಗಿ ಯುವ ವ್ಯದ್ಯೆ ಸಾವನ್ನಪ್ಪಿದಳು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries