HEALTH TIPS

ಪನ್ನಾ: ಎರಡು ಹುಲಿ ಮರಿಗಳ ಜನನ

               ನ್ನಾ: ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಪಿಟಿಆರ್‌) ಹುಲಿಯೊಂದು ಎರಡು ಮರಿಗಳಿಗೆ ಜನ್ಮ ನೀಡಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದರು.

              ಪಿ-234 ಹುಲಿಯು ಅಕೋಲ ಬಫರ್ ಪ್ರದೇಶದಲ್ಲಿ ಎರಡು ಮರಿಗಳೊಂದಿಗೆ ಕಾಣಿಸಿಕೊಂಡಿದೆ.

ಮರಿಗಳು ಆರೋಗ್ಯಯುತವಾಗಿದ್ದು, ಅವುಗಳು ಜನಿಸಿ ಸುಮಾರು ನಾಲ್ಕು ತಿಂಗಳಾಗಿರಬಹುದು ಎಂದು ಪಿಟಿಆರ್‌ ಕ್ಷೇತ್ರ ನಿರ್ದೇಶಕ ಬ್ರಿಜೇಂದ್ರ ಝಾ ಮಾಹಿತಿ ನೀಡಿದರು.

                ಮೇ ಮೊದಲ ವಾರದಲ್ಲಿ, ಮತ್ತೊಂದು ಹುಲಿ ಪಿ-234 (23) ಸಹ ಎರಡು ಮರಿಗಳೊಂದಿಗೆ ಕಾಣಿಸಿಕೊಂಡಿತ್ತು. ಹೀಗಾಗಿ ಮೇ ತಿಂಗಳಲ್ಲಿ ಪಿಟಿಆರ್‌ನಲ್ಲಿ ನಾಲ್ಕು ಮರಿಗಳು ಜನಿಸಿದಂತಾಗಿದೆ. ಇತ್ತೀಚಿನ ಗಣತಿ ಪ್ರಕಾರ ಪಿಟಿಆರ್‌ನಲ್ಲಿ 78 ಹುಲಿಗಳಿವೆ ಎಂದೂ ಅವರು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries