HEALTH TIPS

ಅಪರೂಪದಲ್ಲಿ ಅಪರೂಪ : ಐದು ಶಿಶುಗಳಿಗೆ ಜನ್ಮ ನೀಡಿದ ಮಹಿಳೆ: ಏನಿದು ಕ್ವಿಂಟುಪ್ಲೆಟ್ಸ್?

               ರಾಂಚಿ: ಜಾರ್ಖಂಡ್‌ ರಾಜ್ಯದಲ್ಲಿ ಮಹಿಳೆಯೊಬ್ಬರು ಐದು ಶಿಶುಗಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ನಡೆದಿದೆ.

                  ಇಲ್ಲಿನ ರಿಮ್ಸ್ ಆಸ್ಪತ್ರೆಯಲ್ಲಿ ಪೆಬ್ರುವರಿ 23ರಂದು ಮಹಿಳೆ 5 ಮಕ್ಕಳಿಗೆ ಜನ್ಮ ನೀಡಿರುವ ಘಟನೆ ವರದಿಯಾಗಿದೆ. ತಾಯಿ ಹಾಗೂ ಶಿಶುಗಳು ಆರೋಗ್ಯವಾಗಿವೆ.


                ಆ ಐದು ಶಿಶುಗಳನ್ನು ವಿಶೇಷ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

            ಹೆರಿಗೆಯ ಬಳಿಕ ಐದು ನವಜಾತ ಶಿಶುಗಳ ಪೋಟೊವನ್ನು ವೈದ್ಯರ ತಂಡ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಡಾ.ಶಶಿಬಾಲಾ ಸಿಂಗ್ ನೇತೃತ್ವದಲ್ಲಿ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ. ಸದ್ಯ ತಾಯಿ ಹಾಗೂ 5 ಶಿಶುಗಳ ವೈದ್ಯರ ಆರೈಕೆಯಲ್ಲಿದ್ದಾರೆ. ಇದು ನಮ್ಮ ರಿಮ್ಸ್‌ ಆಸ್ಪತ್ರೆಯಲ್ಲಿ ನಡೆದ ಅಪರೂಪದ ಮೊದಲ ಘಟನೆ ಎಂದು ಡಾ.ಶಶಿಬಾಲಾ ಸಿಂಗ್ ಹೇಳಿದ್ದಾರೆ.

                                         ಏನಿದು ಕ್ವಿಂಟುಪ್ಲೆಟ್ಸ್?
  •                 ವೈದ್ಯಕೀಯ ಭಾಷೆಯಲ್ಲಿ ಒಂದೇ ಬಾರಿಗೆ ಜನಿಸಿದ ಐದು ಮಕ್ಕಳನ್ನು ಕ್ವಿಂಟುಪ್ಲೆಟ್ಸ್ (quintuplets) ಎಂದು ಕರೆಯಲಾಗುತ್ತದೆ

  •                ಸಾಮಾನ್ಯವಾಗಿ ಐದೂವರೆ ಕೋಟಿ ಜನರಲ್ಲಿ ಒಂದು ಪ್ರಕರಣ​ ಮಾತ್ರ ಕ್ವಿಂಟುಪ್ಲೆಟ್ಸ್ ಆಗಿರುತ್ತದೆ.

  •              ಬಹುತೇಕ ಕ್ವಿಂಟುಪ್ಲೆಟ್ಸ್ ಪ್ರಕರಣಗಳಲ್ಲಿ ಹೆಣ್ಣು ಮತ್ತು ಗಂಡು ಶಿಶುಗಳು ಇರುತ್ತವೆ.

  • ಕ್ವಿಂಟುಪ್ಲೆಟ್ಸ್ ಪ್ರಕರಣಗಳಲ್ಲಿ ಎಲ್ಲಾ ಶಿಶುಗಳು ಗಂಡಾಗಿರುವುದು ಅಥವಾ ಹೆಣ್ಣಾಗಿರುವುದು ತೀರ ಅಪರೂಪ ಎಂದು ವೈದ್ಯಕೀಯ ದಾಖಲೆಗಳು ಹೇಳುತ್ತವೆ.

               ವೈದ್ಯಕೀಯ ಮಾಹಿತಿ ಪ್ರಕಾರ ಈ ವರ್ಷದ ಫೆಬ್ರುವರಿಯಲ್ಲಿ ಬ್ರಿಟನ್‌ನಲ್ಲಿ ಒಂದು ಕ್ವಿಂಟುಪ್ಲೆಟ್ಸ್ ಪ್ರಕರಣ ವರದಿಯಾಗಿದೆ. ಅದು ಬಿಟ್ಟರೆ ಈ ವರ್ಷದಲ್ಲಿ ಇದು ಎರಡನೇ ಪ್ರಕರಣ ಎಂದು ತಜ್ಞರು ಹೇಳಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries