ಬದಿಯಡ್ಕ: ನಬಾರ್ಡ್ ಅಂಗೀಕಾರ ಹೊಂದಿದ ಮುಗು ಜಲಾನಯನ ಯೋಜನೆಯ ವಾರ್ಷಿಕ ಮಹಾಸಭೆ ಜೂ.27 ಮಂಗಳವಾರ ಬೆಳಗ್ಗೆ 10.30 ಕ್ಕೆ ನೀರ್ಚಾಲಿನಲ್ಲಿರುವ ಸಂಘದ ಕಾರ್ಯಾಲಯದಲ್ಲಿ ಜರಗಲಿದೆ. ಈ ಸಭೆಯಲ್ಲಿ ಮುಗು ವಾಟರ್ ಶೆಡ್ ಪ್ರದೇಶದ ಎಲ್ಲ ಫಲಾನುಭವಿಗಳು ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ಸಂಘದ ಪ್ರಕಟಣೆ ತಿಳಿಸಿದೆ.

