ಬದಿಯಡ್ಕ: ಬದಿಯಡ್ಕ ಅಕ್ಷಯ ಇ ಕೇಂದ್ರದ ಉದ್ಘಾಟನಾ ಸಮಾರಂಭÀ ಬುಧವಾರ ಬೆಳಗ್ಗೆ ಜರಗಿತು. ಬದಿಯಡ್ಕ ಮೇಲಿನ ಪೇಟೆಯ ಪಳ್ಳಿಕಂಡ ಕಾಂಪ್ಲೆಕ್ಸ್‍ನಲ್ಲಿ ಕೇರಳ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಯನ್ನು ಗ್ರಾಮಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಎಂ. ಉದ್ಘಾಟಿಸಿದರು. ಗ್ರಾ.ಪಂ. ಸದಸ್ಯ ಶ್ಯಾಮಪ್ರಸಾದ ಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮಪಂಚಾಯಿತಿ ಸದಸ್ಯರುಗಳಾದ ರವಿಕುಮಾರ್, ಈಶ್ವರ ಮಾಸ್ತರ್ ಪೆರಡಾಲ, ಸಾಮಾಜಿಕ ಮುಖಂಡರುಗಳಾದ ಗಂಗಾಧರ ಗೋಳಿಯಡ್ಕ, ರಾಮಪ್ಪ ಮಂಜೇಶ್ವರ, ಜಗನ್ನಾಥ ಶೆಟ್ಟಿ ಬದಿಯಡ್ಕ, ಕರುಣಾಕರ ಪಂಜರಿಕೆ, ಅವಿನಾಶ್ ರೈ ಹಾಗೂ ಇತರರು ಭಾಗವಹಿಸಿದ್ದರು. ಅಕ್ಷಯ ಇ ಕೇಂದ್ರದ ಬ್ಲಾಕ್ ಸಂಚಾಲಕ ಅಶೋಕ ಸ್ವಾಗತಿಸಿ, ಎಸ್.ಸಿ.ಎಸ್ಟಿ ಕೋ ಓಪರೇಟಿವ್ ಸೊಸೈಟಿಯ ಕಾರ್ಯದರ್ಶಿ ಗೋಪಾಲ ಡಿ. ವಂದಿಸಿದರು. ಬದಿಯಡ್ಕ ಅಕ್ಷಯ ಇ ಕೇಂದ್ರದ ಚಂದ್ರಶೇಖರ ಮೆಣಸಿನಪಾರೆ ನೇತೃತ್ವ ವಹಿಸಿದ್ದರು.

.jpg)
