ನವದೆಹಲಿ: 'ಮತಾಂತರ ವಿರೋಧಿ ಕಾನೂನು' ರದ್ದುಪಡಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಶುಕ್ರವಾರ ಖಂಡಿಸಿದೆ. ಕಾಂಗ್ರೆಸ್‌ನ 'ಹಿಂದೂ ವಿರೋಧಿ' ಮತ್ತು 'ರಾಷ್ಟ್ರ ವಿರೋಧಿ' ಮುಖ ಮತ್ತೊಮ್ಮೆ ಜಗಜ್ಜಾಹೀರಾಗಿದೆ ಎಂದು ಟೀಕಿಸಿದೆ.
0
samarasasudhi
ಜೂನ್ 16, 2023
ನವದೆಹಲಿ: 'ಮತಾಂತರ ವಿರೋಧಿ ಕಾನೂನು' ರದ್ದುಪಡಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಶುಕ್ರವಾರ ಖಂಡಿಸಿದೆ. ಕಾಂಗ್ರೆಸ್‌ನ 'ಹಿಂದೂ ವಿರೋಧಿ' ಮತ್ತು 'ರಾಷ್ಟ್ರ ವಿರೋಧಿ' ಮುಖ ಮತ್ತೊಮ್ಮೆ ಜಗಜ್ಜಾಹೀರಾಗಿದೆ ಎಂದು ಟೀಕಿಸಿದೆ.
'ಮುಗ್ಧ ಹಿಂದೂಗಳನ್ನು ಒತ್ತಾಯಪೂರ್ವಕವಾಗಿ ಮತಾಂತರಿಸುವ ಗುಂಪಿನೊಂದಿಗೆ ನಿಲ್ಲುವುದಾಗಿ ಕಾಂಗ್ರೆಸ್ ಸರ್ಕಾರ ಈ ಮೂಲಕ ಸ್ಪಷ್ಟಪಡಿಸಿದೆ' ಎಂದು ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಆರೋಪಿಸಿದ್ದಾರೆ.
'ಹಿಂದೂ ಸಮಾಜವನ್ನು ಶೋಷಿಸುವ ನಿರ್ಧಾರವನ್ನು ಕಾಂಗ್ರೆಸ್ ಕೈಗೊಂಡಿದೆ. ಆದರೆ, ರಾಜ್ಯದ ಜನರು ಇದನ್ನು ಸಹಿಸುವುದಿಲ್ಲ. ಇದರ ವಿರುದ್ಧ ವಿಎಚ್‌ಪಿ, ಬಜರಂಗ ದಳ ಮತ್ತಿತರ ಹಿಂದೂ ಸಂಘಟನೆಗಳು ಕರ್ನಾಟಕದಾದ್ಯಂತ ಪ್ರತಿಭಟನೆ ನಡೆಸಲಿವೆ' ಎಂದು ಎಚ್ಚರಿಕೆ ನೀಡಿದ್ದಾರೆ.