ಕೊಚ್ಚಿ: ಆತ ಗುತ್ತಿಗೆ ಪಡೆದ ಜಮೀನಿನಲ್ಲಿ ಶುಂಠಿ ಬೆಳೆದಿದ್ದ. ಆದರೆ ಅದೊಂದು ದಿನ ಕಾಡಾನೆ ದಾಳಿಯಿಂದ ಸಮೃದ್ಧವಾಗಿ ಫಸಲು ಬಂದಿದ್ದ ಶುಂಠಿ ಸಂಪೂರ್ಣವಾಗಿ ನಾಶವಾಗಿತ್ತು. ಈ ವೇಳೆ ಮುಂದೇನು ಎಂಬ ಯೋಚನೆ ಬಂದಿದ್ದರೂ, ನಂತರದ ದಿನಗಳಲ್ಲಿ ಆತನ ಅದೃಷ್ಟವೇ ಬದಲಾಗಿದೆ.
0
samarasasudhi
ಜೂನ್ 18, 2023
ಕೊಚ್ಚಿ: ಆತ ಗುತ್ತಿಗೆ ಪಡೆದ ಜಮೀನಿನಲ್ಲಿ ಶುಂಠಿ ಬೆಳೆದಿದ್ದ. ಆದರೆ ಅದೊಂದು ದಿನ ಕಾಡಾನೆ ದಾಳಿಯಿಂದ ಸಮೃದ್ಧವಾಗಿ ಫಸಲು ಬಂದಿದ್ದ ಶುಂಠಿ ಸಂಪೂರ್ಣವಾಗಿ ನಾಶವಾಗಿತ್ತು. ಈ ವೇಳೆ ಮುಂದೇನು ಎಂಬ ಯೋಚನೆ ಬಂದಿದ್ದರೂ, ನಂತರದ ದಿನಗಳಲ್ಲಿ ಆತನ ಅದೃಷ್ಟವೇ ಬದಲಾಗಿದೆ.
ಕೇರಳದ ಇಡುಕ್ಕಿ ಮೂಲದ ವಿ.ಕೆ.ಬಾಬು ಎಂಬ ಕೋಕೋ ವ್ಯಾಪಾರಿ, ತನ್ನ ಅಂಗಡಿಯ ಹೊರಭಾಗದಲ್ಲಿ ಆನೆಯೊಂದರ ಕಲಾಕೃತಿ ನಿರ್ಮಿಸಿದ್ದಾರೆ. ಸುಮಾರು ಎರಡು ಲಕ್ಷ ರೂಪಾಯಿ ಖರ್ಚು ಮಾಡಿ, ಎಂಟು ಅಡಿ ಎತ್ತರದ ಆನೆಯ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಇದಕ್ಕೆ ಕಾರಣ ಅರಿಕೊಂಬನ್ ಎಂಬ ಕಾಡಾನೆ ಅದೃಷ್ಟ ತಂದಿದೆ ಎಂಬ ನಂಬಿಕೆ.
ಐದು ವರ್ಷಗಳ ಹಿಂದೆ ವಿ.ಕೆ ಬಾಬು ಜಮೀನು ಗುತ್ತಿಗೆ ಪಡೆದು ಶುಂಠಿ ಕೃಷಿ ಮಾಡುತ್ತಿದ್ದರು. ಈ ವೇಳೆ ಭತ್ತ ಬೆಳೆಯಲಾಗಿದೆ ಎಂದು ಅರಿತ ಆನೆ ಗದ್ದೆಗೆ ದಾಳಿ ಮಾಡಿತ್ತು. ಇದರಿಂದ ಶುಂಠಿ ಕೃಷಿ ಸಂಪೂರ್ಣ ನಾಶವಾಗಿ, ನಷ್ಟ ಅನುಭವಿಸಬೇಕಾಗಿ ಬಂದಿತ್ತು. ಕಾಡಾನೆ ಅರಿಕೊಂಬನ್ ದಾಳಿಯ ನಂತರ ತನ್ನ ಕೃಷಿ ಸಮೃದ್ಧವಾಗಿದೆ ಎಂದು ವಿ.ಕೆ. ಬಾಬು ಬಲವಾಗಿ ನಂಬುತ್ತಾರೆ. ಇದಕ್ಕೆ ಕಾರಣವೂ ಇದೆ.
ಶುಂಠಿ ಬೆಳೆಯನ್ನು ಆನೆ ತುಳಿದರೆ ಆ ಜಮೀನಿನಲ್ಲಿ ಉತ್ತಮ ಇಳುವರಿ ಬರುತ್ತದೆ ಎಂದು ಬುಡಕಟ್ಟು ಜನರು ಒಮ್ಮೆ ಹೇಳಿದ್ದರು. ಇದು ನನ್ನ ವೈಯಕ್ತಿಕ ಅನುಭವದಿಂದ ನಿಜವಾಗಿದೆ. ಹೀಗಾಗಿ ನನ್ನ ಅದೃಷ್ಟ ಬದಲಾಯಿಸಿದ, ಅರಿಕೊಂಬನ್ ಆನೆಯ ಪ್ರತಿಮೆ ಅಂಗಡಿಯ ಮುಂಭಾಗ ಸ್ಥಾಪಿಸಿದ್ದೇನೆ. ಪುನ್ನಯಾರ್ ಮೂಲದ ಬಿನು ಎಂಬುವರು ಆನೆಯ ಕಲಾಕೃತಿಯನ್ನು ರಚಿಸಿದ್ದಾರೆ. ಇದೀಗ ಅಕ್ಕಪಕ್ಕದ ಜನರು, ಮಕ್ಕಳು, ಕಲಾಕೃತಿಯೊಂದಿಗೆ ಫೋಟೋ ಕ್ಲಿಕ್ಕಿಸಲು ಮುಗಿಬೀಳುತ್ತಿದ್ದಾರೆ ಎಂದು ವಿ.ಕೆ.ಬಾಬು ಹೇಳಿಕೊಂಡಿದ್ದಾರೆ.