HEALTH TIPS

ಮುಂಗಾರು ಆರಂಭ: ಗೋವಾದ ಬೀಚ್‌ಗಳಿಗೆ ಪ್ರವೇಶ ನಿಷೇಧ; ನಿಲ್ಲದ ಪ್ರವಾಸಿಗರ ಭೇಟಿ

               ಪಣಜಿ: ಗೋವಾದಲ್ಲಿ ಮುಂಗಾರು ಆರಂಭವಾಗಿದ್ದು, ಬೀಚ್‌ಗಳನ್ನು ಯಾವುದೇ ರೀತಿಯ ಚಟುವಟಿಕೆಗೆಗೆ ಅವಕಾಶ ನೀಡದೆ ಅಧಿಕಾರಿಗಳು ಮುಚ್ಚಿದ್ದಾರೆ. ಆದರೆ, ಕಡಿಮೆ ಸಂಖ್ಯೆಯಲ್ಲಿದ್ದರೂ ಪ್ರವಾಸಿಗರು ಮಾತ್ರ ಸಮುದ್ರ ತೀರಗಳಲ್ಲಿ ಕಂಡುಬರುತ್ತಿದ್ದಾರೆ.

               ಮೇ ಕೊನೆಯ ವಾರದಲ್ಲಿ ತೀರದಲ್ಲಿದ್ದ ಬೀಚ್ ಷಾಕ್‌ಗಳನ್ನು ಕಿತ್ತುಹಾಕಲಾಗಿದ್ದು, ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಜಲಕ್ರೀಡೆ ಚಟುವಟಿಕೆಗಳನ್ನು ಸಹ ಮುಚ್ಚಲಾಗಿದೆ.

                 ನಿಷೇಧವಿದ್ದರೂ ಪ್ರವಾಸಿಗರು ಕಡಲತೀರಗಳಿಗೆ ಭೇಟಿ ನೀಡುವುದನ್ನು ಮುಂದುವರೆಸಿದ್ದಾರೆ. ಆದರೆ, ಪ್ರವಾಸಿಗರ ಸಂಖ್ಯೆ ಕಡಿಮೆಯಿದೆ.

                 ಶೇ 20 ರಷ್ಟು ಪ್ರವಾಸಿಗರು ಮಳೆಗಾಲದಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ಸದ್ಯ ಸಮುದ್ರದ ತೀರಗಳಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ. ಎತ್ತರದ ಅಲೆಗಳ ಕಾರಣದಿಂದಾಗಿ ಸಮುದ್ರದಲ್ಲಿ ಈಜದಂತೆ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ದಕ್ಷಿಣ ಗೋವಾದ ಕೊಲ್ವಾ ಬೀಚ್‌ನ ಪ್ರವಾಸಿ ಟ್ಯಾಕ್ಸಿ ನಿರ್ವಾಹಕ ಅಬ್ದುಲ್ ಶೇಖ್ ಹೇಳಿದರು.

               ಪ್ರವಾಸಿ ಸೀಸನ್ ಬಹುತೇಕ ಮುಚ್ಚಿಹೋಗಿದ್ದು, ಟ್ಯಾಕ್ಸಿ ನಿರ್ವಾಹಕರಿಗೆ ವ್ಯಾಪಾರವಿಲ್ಲದಂತಾಗಿದೆ ಎಂದು ಅವರು ಹೇಳಿದರು.
                ಕೊಲ್ವಾ ಬೀಚ್‌ನಲ್ಲಿ ಪ್ರವಾಸಿಗರು ಬುಧವಾರ ಮಳೆಯನ್ನು ಆನಂದಿಸುತ್ತಿರುವುದು ಕಂಡುಬಂತು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರದಿಂದ ತೊಡಗಿರುವ ಖಾಸಗಿ ಜೀವರಕ್ಷಕ ಸಂಸ್ಥೆ ತನ್ನ ಸಿಬ್ಬಂದಿಯನ್ನು ಪೂರ್ಣವಾಗಿ ನಿಯೋಜಿಸಿದೆ.

                    ಮಂಗಳವಾರ ಗೋವಾಕ್ಕೆ ಆಗಮಿಸಿದ ಹರಿಯಾಣದ ಅಂಬಾಲಾದ ಕನ್ವಾಲ್ಜೀತ್ ಸಿಂಗ್ ಮಾತನಾಡಿ, ತಮ್ಮ ಸ್ನೇಹಿತರಾದ ತೇಜಿಂದರ್ ಸಿಂಗ್ ಮತ್ತು ಸುರೀಂದರ್ ಸಿಂಗ್ ಅವರೊಂದಿಗೆ ಗೋವಾದಲ್ಲಿದ್ದು, ಕರಾವಳಿ ರಾಜ್ಯಕ್ಕೆ ಭೇಟಿ ನೀಡಲು ಇದು ಉತ್ತಮ ಸಮಯವಾಗಿದೆ. 'ಯಾವುದೇ ಮಾಲಿನ್ಯವಿಲ್ಲ, ಶಬ್ದವಿಲ್ಲ. ಕಡಲತೀರಗಳು ಖಾಲಿಯಾಗಿವೆ ಮತ್ತು ಇಲ್ಲಿ ಶಾಂತಿಯುತವಾಗಿ ಕುಳಿತುಕೊಳ್ಳಬಹುದು' ಎಂದು ಹೇಳಿದರು.

               ಮಳೆಗಾಲದಲ್ಲಿ ಜನರು ಗೋವಾಕ್ಕೆ ಬರಬೇಕು ಎನ್ನುವ ಕೇರಳದ ಬ್ಯಾಂಕ್ ಉದ್ಯೋಗಿ ಜನಾರ್ದನ್ ಕೆ.ಸಿ. ಅವರೂ ಕೂಡ ಸ್ನೇಹಿತರ ಜೊತೆ ಆಗಮಿಸಿದ್ದಾರೆ. ನಾವು ಹೋಟೆಲ್ ಕೊಠಡಿಗಳನ್ನು ಬಹಳ ಸುಲಭವಾಗಿ ಪಡೆದುಕೊಂಡಿದ್ದೇವೆ. ಮಳೆಗಾಲದಲ್ಲಿ ಭೇಟಿ ನೀಡಲು ಇದು ಉತ್ತಮ ಸ್ಥಳವಾಗಿದೆ ಎನ್ನುತ್ತಾರೆ.

               ಮುಂಬೈನ ಕಾರ್ಪೊರೇಟ್ ವೃತ್ತಿಪರ ಶ್ರೀಕಾಂತ್ ಬಸೀರ್ಕರ್, ಬೀಚ್‌ಗಳಲ್ಲಿ ಪರಿಸರವು ತುಂಬಾ ಶಾಂತಿಯುತವಾಗಿದ್ದರೂ ಬೀಚ್‌ಗಳಲ್ಲಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ನೋಡಿ ಆಘಾತವಾಯಿತು. ಮಳೆಯ ಸಮಯದಲ್ಲಿ ಕಡಲತೀರಗಳನ್ನು ಸಂಪೂರ್ಣವಾಗಿ ಮುಚ್ಚಬಾರದು. ಕೆಲವು ವಿದೇಶಗಳಲ್ಲಿ, ಮಳೆಯ ಸಮಯದಲ್ಲಿಯೂ ಬೀಚ್‌ಗಳಲ್ಲಿ ಚಟುವಟಿಕೆಗಳಿವೆ ಎಂದು ಅವರು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries