ನವದೆಹಲಿ: ಗುಜರಾತ್ ಕರಾವಳಿ ಪ್ರದೇಶವನ್ನು ಬಿಪೊರ್‌ಜಾಯ್ ಚಂಡಮಾರುತ ಪ್ರವೇಶಿಸಿದ ಬಳಿಕ ಇದುವರೆಗೆ ಯಾವುದೇ ಸಾವು ಉಂಟಾಗಿಲ್ಲ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಮಹಾನಿರ್ದೇಶಕ ಅತುಲ್ ಕರ್ವಾಲ್ ಶುಕ್ರವಾರ ತಿಳಿಸಿದ್ದಾರೆ.
0
samarasasudhi
ಜೂನ್ 16, 2023
ನವದೆಹಲಿ: ಗುಜರಾತ್ ಕರಾವಳಿ ಪ್ರದೇಶವನ್ನು ಬಿಪೊರ್‌ಜಾಯ್ ಚಂಡಮಾರುತ ಪ್ರವೇಶಿಸಿದ ಬಳಿಕ ಇದುವರೆಗೆ ಯಾವುದೇ ಸಾವು ಉಂಟಾಗಿಲ್ಲ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಮಹಾನಿರ್ದೇಶಕ ಅತುಲ್ ಕರ್ವಾಲ್ ಶುಕ್ರವಾರ ತಿಳಿಸಿದ್ದಾರೆ.
1,000 ಹಳ್ಳಿಗಳಲ್ಲಿ ವಿದ್ಯುತ್ ಕಡಿತ...
ಭಾರಿ ಮಳೆ ಹಾಗೂ ಗಾಳಿಯಿಂದಾಗಿ ಸುಮಾರು 1,000 ಹಳ್ಳಿಗಳಲ್ಲಿ ವಿದ್ಯುತ್ ಕಡಿತ ಉಂಟಾಗಿದೆ.
ಗುರುವಾರ ಸಂಜೆ 6.30ರ ಹೊತ್ತಿಗೆ ಸೌರಾಷ್ಟ್ರ ಹಾಗೂ ಕಛ್ ಕರಾವಳಿ ಪ್ರದೇಶದಲ್ಲಿ ಚಂಡಮಾರುತ ಅಪ್ಪಳಿಸಿತು. ಪರಿಣಾಮ ಭಾರಿ ಗಾಳಿ ಸಹಿತ ಮಳೆ ಸುರಿಯಿತು.
ದುರದೃಷ್ಟವಶಾತ್ ಚಂಡಮಾರುತ ಪ್ರವೇಶಕ್ಕೂ ಮೊದಲು ನಡೆದ ಘಟನೆಯಲ್ಲಿ ಇಬ್ಬರು ಸಾವಿಗೀಡಾಗಿದ್ದರು ಎಂದು ಅವರು ತಿಳಿಸಿದರು.
ಕಛ್ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿ ಉಂಟಾಗಿದೆ ಎಂದು ಅವರು ಮಾಹಿತಿ ನೀಡಿದರು.
500ರಷ್ಟು ಗುಡಿಸಲಿಗೆ ಹಾನಿ ಉಂಟಾಗಿದ್ದು, 800 ಮರಗಳು ಧರೆಗುರುಳಿವೆ. ರಾಜ್ಯ ವಿಪತ್ತು ಸ್ಪಂದನಾ ಪಡೆಯ ನೆರವಿನೊಂದಿಗೆ ಪರಿಹಾರ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ರಾಜಸ್ಥಾನದತ್ತ ಚಂಡಮಾರುತ...
ಬಿಪೊರ್‌ಜಾಯ್ ಚಂಡಮಾರುತ ರಾಜಸ್ಥಾನದತ್ತ ಮುನ್ನುಗ್ಗಿದೆ. ಇದರಿಂದಾಗಿ ಭಾರಿ ಮಳೆಯಾಗುತ್ತಿದ್ದು, ಮುನ್ನೆಚ್ಚೆರಿಕೆ ವಹಿಸಲಾಗಿದೆ.